3 ದಿನಗಳ ಶಿಬಿರದಲ್ಲಿ 300ಕ್ಕೂ ಅಧಿಕ ಆಧಾರ್ ನೋಂದಣಿ, ತಿದ್ದುಪಡಿ
ಪುತ್ತೂರು: ಕುಂಬ್ರ ವರ್ತಕರ ಸಂಘದ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಯೋಗದೊಂದಿಗೆ ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿ ಅ.30ರಿಂದ ನ.1ರ ತನಕ ನಡೆದ ಮೂರು ದಿನಗಳ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರದ ಸಮಾರೋಪ ಸಮಾರಂಭ ನಡೆದಿದ್ದು 3 ದಿನಗಳ ಶಿಬಿರದಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ತಮ್ಮ ಆಧಾರ್ ನೋಂದಾವಣೆ, ತಿದ್ದುಪಡಿ ಮಾಡಿಸಿಕೊಂಡರು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ ಮಾತನಾಡಿ, 2 ದಿನಗಳ ಶಿಬಿರ ಹಮ್ಮಿಕೊಂಡಿದ್ದು ಆದರೆ ಸಾರ್ವಜನಿಕರ ಒತ್ತಾಯದ ಮೇರೆಗೆ ಶಿಬಿರವನ್ನು ಒಂದು ಹೆಚ್ಚುವರಿ ಮಾಡಿದ್ದು ಸುಮಾರು 3೦೦ ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ. ಶಿಬಿರದ ಯಶಸ್ವಿಗೆ ಸಹಕರಿಸಿ ಸಂಘದ ಸರ್ವ ಪದಾಧಿಕಾರಿಗಳಿಗೆ, ಅಂಚೆ ಇಲಾಖೆಯ ಪುತ್ತೂರು ವಿಭಾಗದ ಅಧಿಕಾರಿ ವರ್ಗಕ್ಕೆ, ಕಂಪ್ಯೂಟರ್ ಅಪರೇಟರ್‌ಗಳಿಗೆ, ತಾಂತ್ರಿಕ ವರ್ಗಕ್ಕೆ ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ, ವರ್ತಕರ ಸಂಘದಿಂದ ಸಮಾಜಮುಖಿ ಕಾರ್ಯಕ್ರಮಗಳು ಮೂಡಿಬರುತ್ತಿದ್ದು ಆಧಾರ್‌ನ ತಿದ್ದುಪಡಿ ವಿಷಯದಲ್ಲಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ, ಮುಂದಿನ ದಿನಗಳಲ್ಲಿ ಸಂಘಕ್ಕೆ ಉನ್ನತ ಪ್ರಶಸ್ತಿಗಳು ದೊರೆಯಲಿ ಎಂದು ಶುಭ ಹಾರೈಸಿದರು.
ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಡಾ.ಸತ್ಯವತಿ ಆರ್.ಆಳ್ವರವರು, ಸಂಘದ ಕೆಲಸ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಶಿಕ್ಷಕಿ ಜೂಲಿಯಾನ ಮೊರಸ್‌ರವರು, ಸಂಘವು ಬಹಳಷ್ಟು ಒಳ್ಳೆಯ, ಜನಮುಖಿ ಕೆಲಸಗಳನ್ನು ನಡೆಸಿಕೊಂಡು ಬರುತ್ತಿದ್ದು ಶ್ಲಾಘನೀಯ ಎಂದರು. ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಪದ್ಮನಾಭ ರೈ ಅರೆಪ್ಪಾಡಿ, ಕುಂಬ್ರ ಕೆಐಸಿ ಪ್ರಾಧ್ಯಾಪಕ ಇನಾಯತುಲ್ಲಾ ಉಪಸ್ಥಿತರಿದ್ದರು. ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್. ಸ್ವಾಗತಿಸಿದರು. ಪದ್ಮನಾಭ ಆಚಾರ್ಯ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ದಿವಾಕರ ಶೆಟ್ಟಿ, ಎಸ್.ಮಾಧವ ರೈ ಕುಂಬ್ರ, ಬದ್ರುನ್ನೀಸಾ, ರೇಷ್ಮಾ, ಚರಿತ್ ಕುಮಾರ್, ರಮ್ಯಶ್ರೀ, ಜಯರಾಮ ಆಚಾರ್ಯ, ಉದಯ ಆಚಾರ್ಯ, ಹನೀಫ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಸಹಕರಿಸಿದ್ದರು.
3 ದಿನ 300 ಕ್ಕೂ ಅಧಿಕ ಆಧಾರ್ ತಿದ್ದುಪಡಿ
ಆಧಾರ್ ತಿದ್ದುಪಡಿ ಮುಗಿಯದ ಕಾರ್ಯವಾಗಿದ್ದು ಕುಂಬ್ರ ವರ್ತಕರ ಸಂಘದ ಹಮ್ಮಿಕೊಂಡಿದ್ದ 3 ದಿನಗಳ ಆಧಾರ್ ಮೇಳದಲ್ಲಿ ಸುಮಾರು 3೦೦ ಕ್ಕೂ ಅಧಿಕ ಮಂದಿ ತಮ್ಮ ಆಧಾರ್ ತಿದ್ದುಪಡಿ, ಹೊಸ ನೋಂದಾವಣೆ ಇತ್ಯಾದಿಗಳನ್ನು ಮಾಡಿಸಿಕೊಂಡರು. 2 ದಿನ ಮೇಳ ಹಮ್ಮಿಕೊಂಡಿದ್ದು ಆದರೆ ಸಾರ್ವಜನಿಕರ ಒತ್ತಾಯದ ಮೇರೆಗೆ ಹೆಚ್ಚುವರಿ 1 ದಿನ ಮಾಡಲಾಗಿತ್ತು.
ವರ್ತಕರ ಸಂಘದ 20ನೇ ವರ್ಷಾಚರಣೆಯ ಅಂಗವಾಗಿ ಮೊದಲ ತಿಂಗಳ ಕಾರ್ಯಕ್ರಮದಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಹಮ್ಮಿಕೊಂಡಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು ಸುಮಾರು 300 ಮಂದಿ ತಮ್ಮ ಆಧಾರ್ ತಿದ್ದುಪಡಿ ಮಾಡಿಸಿಕೊಂಡರು. ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.
ರಫೀಕ್ ಅಲ್‌ರಾಯ
ಅಧ್ಯಕ್ಷರು ವರ್ತಕರ ಸಂಘ ಕುಂಬ್ರ