ಬಂಟ್ವಾಳ : ಸಜೀಪಮೂಡ ಗ್ರಾಮದಲ್ಲಿ 1991ರಲ್ಲಿ ಸ್ಥಾಪನೆಗೊಂಡ ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘವು 2005 ನ. 18ರಂದು ಬ್ಯಾಂಕಿಂಗ್ ವ್ಯವಹಾರಕ್ಕೆ ಚಾಲನೆ ನೀಡಿದೆ.ಕನಿಷ್ಠ ಅವಧಿಯಲ್ಲಿ 13ನೇ ಶಾಖೆಯನ್ನು ತೆರೆಯುವ ಮೂಲಕ ಗರಿಷ್ಠ ಸಾಧನೆಯನ್ನು ಮಾಡಿದೆ.ಪುಣಚ ಗ್ರಾಮದ ಪರಿಯಲ್ತಡ್ಕ ಪ್ರಗತಿ ಕಾಂಪ್ಲೆಕ್ಸ್‌ನಲ್ಲಿ ನ.5ರಂದು ರವಿವಾರ ಬೆಳಗ್ಗೆ 11 ಗಂಟೆಗೆ ಸಹಕಾರಿಯ ನೂತನ ಪುಣಚ ಶಾಖೆ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಪ್ರಕಟಿಸಿದ್ದಾರೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಶಾಖೆಯನ್ನು ಉದ್ಘಾಟಿಸುವರು, ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ. ರಮಾನಾಥ ರೈ, ಪುಣಚ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಅಧ್ಯಕ್ಷ, ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಸದಸ್ಯ ಎಸ್. ಆರ್.ರಂಗಮೂರ್ತಿ, ಪುಣಚ ಗ್ರಾ. ಪಂ. ಅಧ್ಯಕ್ಷೆ ಬೇಬಿ, ಪರಿಯಲ್ತಡ್ಕ ಜುಮ್ಮಾ ಮಸೀದಿ ಅಧ್ಯಕ್ಷ , ಜಿ. ಪಂ. ಮಾಜಿ ಉಪಾಧ್ಯಕ್ಷ ಎಂ. ಎಸ್. ಮಹಮ್ಮದ್, ಉಪ್ಪಿನಂಗಡಿ ಮೂರ್ತೆದಾರರ ಸೇ.ಸ. ಸಂಘ ನಿ. ಮಾಜಿ ಅಧ್ಯಕ್ಷ ಹಾಗೂ ಶ್ರೀ ಗುರುದೇವ ವಿ. ಸ. ಸಂಘ ಬೆಳ್ತಂಗಡಿ ಇದರ ನಿರ್ದೇಶಕ ಡಾ-. ರಾಜರಾಮ್ ಕೆ.ಬಿ., ಪುತ್ತೂರಿನ ಹಿರಿಯ ನ್ಯಾಯವಾದಿ, ಪುತ್ತೂರು ಟೌನ್ ಕೋ. ಅ. ಬ್ಯಾಂಕ್ ಲಿ. ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ, ಪುಣಚ ಮನೆಲಾ ಕ್ರಿಸ್ತರಾಜ ಚರ್ಚ್‌ನ ಧರ್ಮಗುರುಗಳಾದ ವಂ|ಫಾ|ನೆಲ್ಸನ್ ಒಲಿವೆರಾ, ಪರಿಯಲ್ತಡ್ಕ ಪ್ರಗತಿ ಕಾಂಪ್ಲೆಕ್ಸ್ ಮಾಲಕ ಎಚ್. ನಾರಾಯಣ ಪೂಜಾರಿ, ಪುಣಚ ಬಿಲ್ಲವ ಸಂಘ ಅಧ್ಯಕ್ಷರು , ಪುಣಚ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ವಿಟ್ಲ ಮೂರ್ತೆದಾರರ ಸೇ. ಸ. ಮಾಜಿ ಅಧ್ಯಕ್ಷ ಜನಾರ್ಧನ ಕೆ.ಕೆ. ಭಾಗವಹಿಸುವರು.
ಶಾಖೆಗಳು
ಬೋಳಂತೂರು, ಚೇಳೂರು, ಫಜೀರು, ವಾಮದಪದವು, ಸಿದ್ದಕಟ್ಟೆ, ಅಣ್ಣಳಿಕೆ, ಮಾರ್ನಬೈಲು, ಮಣಿಹಳ್ಳ, ಕಾವಳಮುಡೂರು ಎನ್.ಸಿ.ರೋಡ್, ಸಾಲೆತ್ತೂರು., ಕಂಬಳಬೆಟ್ಟು ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿದೆ.ಒಂದೇ ವ್ಯವಸ್ಥೆಯಡಿ ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಆಭರಣ ಸಾಲ, ಅಡಮಾನ ಸಾಲ, ವಾಹನ ಸಾಲ, ಮೂರ್ತೆದಾರಿಕೆ ಸಾಲ, ವ್ಯಾಪಾರ ಸಾಲ, ವೈಯಕ್ತಿಕ ಸಾಲ, ಠೇವಣಾತಿ ಸಾಲ, ಸ್ವಸಹಾಯ ಸಾಲ, ಮಹಿಳೆಯರಿಗೆ ತ್ವರಿತ ಸಾಲ, ಪಿಗ್ಮಿ ಮುಂಗಡ ಸಾಲವನ್ನು ನೀಡಲಾಗುತ್ತಿದೆ.
ಹಿರಿಯ ನಾಗರಿಕರಿಗೆ ಮತ್ತು ಸಂಘ ಸಂಸ್ಥೆಗಳ ಠೇವಣಾತಿಗೆ 0.5% ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ, ಸಿದ್ದಕಟ್ಟೆ ಶಾಖೆಯಲ್ಲಿ ಇ-ಸ್ಟ್ಯಾಪಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ. RTGS/NEFT ಸೌಲಭ್ಯ ಹಾಗೂ ಸಿದ್ಧಕಟ್ಟೆ ಶಾಖೆಯಲ್ಲಿ ಇ- ಸ್ಟಾಂಪಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ.
ಸಂಘವು ಗುರುಶ್ರೀ ಎಂಬ ಹೆಸರಿನಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಿದ್ದು ಸ್ವಸಹಾಯ ಸಂಘದ ಸದಸ್ಯರಿಗೆ ಅತೀ ಕಡಿಮೆ ಅವಧಿಯಲ್ಲಿ ಬ್ಯಾಂಕ್ ಸಾಲವನ್ನು ನೀಡುತ್ತಿದೆ . ಸೇವಾ ಕಾರ್ಯವಾಗಿ ಸಂಘದ ಸದಸ್ಯರಿಗೆ ವಿದ್ಯಾರ್ಥಿ ವೇತನ, ಕಡುಬಡತನದಲ್ಲಿರುವ ಅನಾರೋಗ್ಯ ಪೀಡಿತ ಮೂರ್ತೆದಾರರಿಗೆ ಸಹಾಯಧನ ನೀಡಲಾಗುತ್ತಿದೆ. ಪ್ರತೀವರ್ಷ ಹಿರಿಯ ಮೂರ್ತೆದಾರರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
ವ್ಯವಹಾರದ ಪ್ರಗತಿ
ಸಂಘವು ಪ್ರಸ್ತುತ ಒಟ್ಟು 10,585 ಸದಸ್ಯರನ್ನು ಹೊಂದಿದ್ದು, 161.75 ಕೋಟಿ ರೂ.ವ್ಯಾಪಾರ ವಹಿವಾಟನ್ನು ನಡೆಸಿದೆ. ಪ್ರಸ್ತುತ ವರ್ಷದಲ್ಲಿ 17,22,007.65 ರೂ. ವಾರ್ಷಿಕ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 25 ಡಿವಿಡೆಂಡ್ ನೀಡಲಾಗಿದೆ. 25,53,28,133 ರೂ. ಸಾಲ ನೀಡಿದ್ದು 30,24,50,631.69 ರೂ. ಠೇವಣಾತಿ ಹೊಂದಿದೆ. 23,13,225 ಷೇರುಗಳನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ಆರಂಭಿಸಿ ಹೆಚ್ಚಿನ ಮಹಿಳೆಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕಾರ್ಯವ್ಯಾಪ್ತಿಯಲ್ಲಿ ತೆರೆಯುವ ಯೋಜನೆಯನ್ನು ಸಂಘ ಹೊಂದಿದೆ.
ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿ ಸಹಿತ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಆಗಿದ್ದು, ಉದ್ಯೋಗ ಹಾಗೂ ಸ್ವಾವಲಂಬಿ ಬದುಕಿಗೆ ಸಂಘವು ಅವಕಾಶ ಕಲ್ಪಿಸಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ಆರಂಭಿಸಿ ಹೆಚ್ಚಿನ ಮಹಿಳೆಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದು.
ಸಂಘದ ಪ್ರಧಾನ ಕಚೇರಿಗೆ ಸ್ವಂತ ಕಟ್ಟಡವನ್ನು ಹೊಂದುವ ಉದ್ದೇಶದಿಂದ ಸಜೀಪಮೂಡ ಗ್ರಾಮದ ಸುಭಾಷ್‌ನಗರದಲ್ಲಿ 0.50 ಎಕ್ರೆ ಜಮೀನು ಖರೀದಿಸಲಾಗಿದೆ.
ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ, ಉಪಾಧ್ಯಕ್ಷರಾಗಿ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾಗಿ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ ಚೇಳೂರು, ಅಶೋಕ್ ಪೂಜಾರಿ ಕೋಮಾಲಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಾಲೆ, ಕೆ. ಸುಜಾತ, ವಾಣಿವಸಂತ, ಅರುಣ್ ಕುಮಾರ್ ಎಂ, ಆಶೀಶ್ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮಮತಾ ಜಿ. ಸಂಘವನ್ನು ಮುನ್ನಡೆಸುತ್ತಿದ್ದಾರೆ.
ಸಂಘಟಕ ಕೆ. ಸಂಜೀವ ಪೂಜಾರಿ
ನಗು ಮುಖ, ಎಲ್ಲರೊಂದಿಗೆ ಮುಕ್ತ ಮಾತು. ಸ್ವಚ್ಚ ಶುಭ್ರ ಉಡುಗೆ ಅವರ ನಿತ್ಯದ ಕ್ರಮವಾಗಿದೆ.ಬದುಕಿನ ಅನುಭವ ಅವರಿಗೆ ವ್ಯವಹಾರದ ಪಾಠ ಕಲಿಸಿದೆ. ರಾಜಕೀಯ, ಸಾಮಾಜಿಕ, ಸಹಕಾರಿ ಕ್ಷೇತ್ರದ ಜ್ಞಾನ ಅವರನ್ನು ಬಹುಮುಖಿ ಸಾಧಕನಾಗಿ ಬಿಂಬಿಸಿದೆ.ಅವರು ರಾಜಕಾರಣದಲ್ಲಿ 20 ವರ್ಷಗಳಿಂದ ಗ್ರಾ.ಪಂ. ಸದಸ್ಯರಾಗಿ, ಒಂದು ಅವಽಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತಾ.ಪಂ. ಸದಸ್ಯರಾಗಿ , ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹಲವು ಹೊಣೆಗಾರಿಕೆಗಳನ್ನು ಯಶಸ್ವಿ ನಿರ್ವಹಿಸಿದ್ದಾರೆ.
ಸಹಕಾರಿ ಕ್ಷೇತ್ರದ ಸೇವೆಯಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷರಾಗಿ, ಎರಡು ಅವಧಿಗೆ ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕಿನ ಉಪಾಧ್ಯಕ್ಷರಾಗಿ, ಶ್ರೀ ಗುರು ಕೋ-ಅಪರೇಟಿವ್ ಸೊಸೈಟಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿ ಅವರು ಸಂಘಟಕರಾಗಿ , ಗೆಜ್ಜೆಗಿರಿ ನಂದನಬಿತ್ತಿಲ್ ಶ್ರೀ ಕೋಟಿ ಚೆನ್ನಯ ದೇಯಿಬೈದೆತಿ ಮೂಲಸ್ಥಾನದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ನಮ್ಮ ಬಿರುವೆರ್ ಒಕ್ಕೂಟದ ಗೌರವ ಅಧಕ್ಷರಾಗಿ, ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ದಾನಿಯಾಗಿದ್ದಾರೆ.
ವ್ಯವಹಾರಿಕ ಕ್ಷೇತ್ರ
ಅವರು ಸುರಭಿ ಬೀಡಿ ಮಾಲಕರು. , ಮೆಲ್ಕಾರ್, ಉಪ್ಪಿನಂಗಡಿ, ಪುತ್ತೂರಿನಲ್ಲಿ ಬಿರ್ವ ಸೆಂಟರ್ ಬಾರ್ ಎಂಡ್ ರೆಸ್ಟೋರೆಂಟ್ ವ್ಯವಹಾರವನ್ನು ನಡೆಸುವ ಮೂಲಕ ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಗುರುತಿಸಿಕೊಂಡವರು.