ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳ 12 ವಿಜ್ಞಾನ ಪ್ರಾಜೆಕ್ಟಗಳು ಇನ್ಸೆಫ್ ರೀಜನಲ್ ಫೇರ್ ನಡೆಸುವ ವಿಜ್ಞಾನ ಪ್ರಾಜೆಕ್ಟ್ ಸ್ಪರ್ಧೆಗೆ ಆಯ್ಕೆಯಾಗಿದೆ. ನವೆಂಬರ್ 25ರಂದು ಮೂಡಬಿದಿರೆಯ ಎಕ್ಸಲೆಂಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಆರನೇ ತರಗತಿಯ ಆದಿತ್ಯ ಕೆ, ಹೃತ್ವಿಕಾ ಆರ್ ನಾಯಕ್, ಶಮಿತಾ ಎಂ, ಸೃಷ್ಟಿ ಎನ್.ವಿ, ಏಳನೇ ತರಗತಿಯ ಪ್ರದ್ಯುಮ್ನ ಡಿ ಆಚಾರ್ಯ, ಎಂಟನೇ ತರಗತಿಯ ಮಿಥುನ್ ಪಿ ಪಿ, ಅದ್ವಿಜ್ ಸಜೇಶ್, ಒಂಭತ್ತನೇ ತರಗತಿಯ ಶಾರೆಲ್ ರೀಮ ಮಾರ್ಟಿಸ್, ಜೆರಿಟ್ ಪಿ ಜೆ, ಮತ್ತು ಹತ್ತನೇ ತರಗತಿಯ ರೀಶಲ್ ಎಲ್ಸಾ ಬೆನ್ನಿ ಭಾಗವಹಿಸಲಿದ್ದಾರೆ. ಒಟ್ಟು 12 ವಿಜ್ಞಾನ ಪ್ರಾಜೆಕ್ಟ್ಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಇವರಿಗೆ ಸಹ ಶಿಕ್ಷಕರಾದ ಶ್ಯಾಮಲಾ ಬಂಗೇರ, ಹರ್ಷಿತಾ ಪ್ರಜ್ವಲ್ ಮತ್ತು ರೀನಾ ಅಲೆಕ್ಸ್ ಮಾರ್ಗದರ್ಶನ ಮಾಡಿದ್ದಾರೆ.