ಉಪ್ಪಿನಂಗಡಿ : ಇಲ್ಲಿನ ವೇದಶಂಕರ ನಗರದಲ್ಲಿರುವ ಶ್ರೀರಾಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಂದು ಸಿರಿ ಪಿಂಗಾರ ಸಾಹಿತ್ಯ ಸಂಘದ ಸಹಯೋಗದಲ್ಲಿ ‘ಸಮುತ್ಕರ್ಷ’ ಎಂಬ ಮಾಸಿಕ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಚಾಲಕ ಯು,ಜಿ ರಾಧಾರವರು, ‘ಸಮುತ್ಕರ್ಷ’ ಪತ್ರಿಕೆಗೆ, ಶಾಲಾ ವರದಿಗಳ ವಿವರದೊಂದಿಗೆ, ಗುರುಗಳ ವೇದಿಕೆ ಎಂಬ ಶೀರ್ಷಿಕೆಯಡಿ ಶಿಕ್ಷಕರ ಸಾಹಿತ್ಯಗಳಿಗೆ ಅನುವು ಮಾಡಿಕೊಡಲಾಗಿದೆ. ಅಲ್ಲದೇ, ಪ್ರಗ್ಯಾನ್ ವೇದಿಕೆ ಎಂಬ ನಾಮಧೇಯ ಕೊಟ್ಟು ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿ, ಸಂಸ್ಕಾರ ಸೌರಭ ಎಂಬ ಶೀರ್ಷಿಕೆಯಡಿ ಮೌಲ್ಯಯುತ ಸಂಸ್ಕಾರವನ್ನು ತಿಳಿಸುವ ಮಾಹಿತಿಗಳನ್ನು, ಚಿಣ್ಣರ ಚಿಲಿಪಿಲಿ ಮತ್ತು ಚಿಣ್ಣರ ಕಲಾಕಾರಂಜಿಯಲ್ಲಿ ವಿದ್ಯಾರ್ಥಿಗಳು ರಚಿಸಿದ ಸಾಹಿತ್ಯಗಳಿಗೆ ಅವಕಾಶ ನೀಡಲಾಗಿದೆ. ಮೆದುಳಿಗೆ ಮೇವು ಎಂಬ ಶೀರ್ಷಿಕೆಯಡಿಯಲ್ಲಿ ಮಕ್ಕಳಿಗೆ ಜ್ಞಾನ ಹೆಚ್ಚಿಸುವ ವಿಚಾರಗಳಿದ್ದು, ಬಹಳ ಸೊಗಸಾಗಿ, ಅಚ್ಚುಕಟ್ಟಾಗಿ ಮಾಸ ಪತ್ರಿಕೆ ಮೂಡಿ ಬಂದಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಸುನಿಲ್ ಅಣಾವು, ಉಪಾಧ್ಯಕ್ಷೆ ಶ್ರೀಮತಿ ಅನುರಾಧ ಆರ್. ಶೆಟ್ಟಿ, ಸದಸ್ಯರಾದ ಜಯಂತ ಪೊರೋಳಿ, ಗಣೇಶ್ ಕುಲಾಲ್, ಪೋಷಕ ಸಂಘದ ಅಧ್ಯಕ್ಷ ಪಿ. ಮೋಹನ್ ಭಟ್ ಉಪಸ್ಥಿತರಿದ್ದರು.
ಪ್ರಾಥಮಿಕ ವಿಭಾಗದ ಮುಖ್ಯಗುರು ವಿಮಲ ತೇಜಾಕ್ಷಿ ಪ್ರಾಸ್ತಾವಿಕ ನುಡಿಗಳ ಜೊತೆಗೆ ಸ್ವಾಗತಿಸಿದರು. ಪ್ರೌಢ ವಿಭಾಗದ ಮುಖ್ಯ ಗುರು ರಘುರಾಮ ಭಟ್ .ಸಿ. ವಂದಿಸಿದರು. ವಿದ್ಯಾರ್ಥಿನಿ ಶಿವಾನಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳು ಸ್ವರಚಿತ ಕಥೆ, ಚುಟುಕು, ಕವನಗಳನ್ನು ವಾಚಿಸಿದರು.