ಕೊಯಿಲ ಬಡಗನ್ನೂರು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

0

ಬಡಗನ್ನೂರುಃ ಕೊಯಿಲ ಬಡಗನ್ನೂರು  ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ನ.1ರಂದು ಆಚರಿಸಲಾಯಿತು. ರಾಜ್ಯದ್ವಜಾರೋಹಣಗೈದು ಬಳಿಕ ನಾಡಗೀತೆಯನ್ನು ಹಾಡಲಾಯಿತು.  ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಯ ಚಿತ್ರಕ್ಕೆ ಶಾಲಾ ಶಿಕ್ಷಕರು, ಮಕ್ಕಳು ಪುಷ್ಪಾರ್ಚಣೆಗೈದರುಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ನಾಯ್ಕ,ಸಿ.ಯಚ್, ಮುಖ್ಯ ಶಿಕ್ಷಕಿ ಪುಷ್ಷಾವತಿ, ಅತಿಥಿ ಶಿಕ್ಷಕಿ ಸರಳಾ ಡಿ, ಗೌರವ ಶಿಕ್ಷಕಿ ಪೂರ್ಣಿಮಾ ತಲೆಂಜಿ ಹಾಗೂ ಅಕ್ಷರದಾಸೋಹ ಸಿಬ್ಬಂದಿಗಳು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮಕ್ಕಳ ಪೋಷಕರು ಭಾಗವಹಿಸಿದ್ದರು.ಸಹ ಶಿಕ್ಷಕ ಗಿರೀಶ್  ಕನ್ನಡ ರಾಜ್ಯೋತ್ಸವದ  ಬಗ್ಗೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here