ನ.19: ಕೆದಂಬಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆ

0

ನಾಳೆಯಿಂದ (ನ.07) ನಾಮಪತ್ರ ಸಲ್ಲಿಕೆ ಆರಂಭ


ಪುತ್ತೂರು: ಕೆದಂಬಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಚುನಾವಣೆಯು ನ.19 ರಂದು ಸಂಘದ ಕಛೇರಿ ಕಟ್ಟಡದಲ್ಲಿ ನಡೆಯಲಿದೆ. ಸಂಘದ ಆಡಳಿತ ಮಂಡಳಿಯ ಒಟ್ಟು 13 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಇದರಲ್ಲಿ 9 ಸಾಮಾನ್ಯ ಸ್ಥಾನಗಳು, ಪ.ಜಾತಿ ಮೀಸಲು, ಪ.ಪಂಗಡ ಮೀಸಲು, ಹಿಂದುಳಿದ ವರ್ಗ ಎ ಮೀಸಲು ಹಾಗೂ ಹಿಂದುಳಿದ ವರ್ಗ ಬಿ. ಮೀಸಲು ಇದರ ತಲಾ ಒಂದೊಂದು ಸ್ಥಾನಗಳು ಚುನಾವಣೆ ನಡೆಯಲಿದೆ.

ನ.7 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು ನಾಮಪತ್ರ ಸಲ್ಲಿಸಲು ಇಚ್ಚಿಸುವ ಸದಸ್ಯರು ನಾಮಪತ್ರವನ್ನು ಕಛೇರಿಯ ಸಮಯದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಂದ ಪಡೆದು ರಿಟರ್ನಿಂಗ್ ಆಫೀಸರ್‌ಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30ರೊಳಗೆ ಖುದ್ದಾಗಿ ಸಲ್ಲಿಸಬೇಕಾಗಿದೆ. ನ.11 ನಾಮಪತ್ರ ಸಲ್ಲಿಕೆಗೆ ಕಡೇಯ ದಿನಾಂಕವಾಗಿದ್ದು ನ.12 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ.13 ರಂದು ಸಂಜೆ 3 ಗಂಟೆಯೊಳಗೆ ನಾಮಪತ್ರ ಹಿಂಪಡೆಯಬಹುದಾಗಿದೆ. ನ.19 ರಂದು ಮತದಾನ ನಡೆಯಲಿದೆ. ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚಿನ ಸ್ಥಾನಕ್ಕೆ ಸ್ಪರ್ಧೆ ಮಾಡುವಂತಿಲ್ಲ ಹೆಚ್ಚಿನ ಮಾಹಿತಿಗೆ ಕಛೇರಿ ಸಮಯದಲ್ಲಿ ಭೇಟಿ ಮಾಡಬಹುದು ಎಂದು ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here