ದರ್ಬೆ ಪರ್ಲಡ್ಕ ಕ್ರಾಸ್‌ನಲ್ಲಿ ನಡೆದ ಅಪಘಾತ-ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು

0

ಪುತ್ತೂರು: ದರ್ಬೆ ಪರ್ಲಡ್ಕ ಕ್ರಾಸ್ ಬಳಿ ನ.6ರಂದು ರಾತ್ರಿ ನಡೆದ ಅಪಘಾತಕ್ಕೆ ಸಂಬಂಧಿಸಿ ಬೈಕ್ ಸವಾರ ಮತ್ತು ಸ್ಕೂಟರ್ ಸವಾರರಿಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.


ನ.6ರಂದು ರಾತ್ರಿ ದರ್ಬೆ ಪರ್ಲಡ್ಕ ಕ್ರಾಸ್ ಬಳಿ ಸ್ಕೂಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಘಟನೆಯಿಂದಾಗಿ ಬೈಕ್ ಸವಾರ ಬೆಟ್ಟಂಪಾಡಿ ಅರುಣ್ ಎನ್.ವಿ.(24ವ) ಮತ್ತು ಸ್ಕೂಟರ್ ಸವಾರ ಮಹಮ್ಮದ್ ಅಶ್ರಫ್ ಎಂಬವರು ಗಾಯಗೊಂಡಿದ್ದು, ಅವರಿಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here