ಕುಂಬ್ರ: ಶಾಲಾ ವಿದ್ಯಾರ್ಥಿನಿಗೆ ಬೈಕ್ ಡಿಕ್ಕಿ, ಗಾಯ

0

ಪುತ್ತೂರು: ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಬೈಕೊಂದು ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ನ.8 ರಂದು ಕುಂಬ್ರದಲ್ಲಿ ನಡೆದಿದೆ.

ಕುಂಬ್ರ ಮಗಿರೆ ನಿವಾಸಿ ಸಲೀಂರವರ ಪುತ್ರಿ, ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 9ನೇ ತರಗತಿ ವಿದ್ಯಾರ್ಥಿನಿ ಅನ್ನತ್ ಬೀಬಿ ಎಂಬವರು ಬೆಳಿಗ್ಗೆ ಶಾಲೆಗೆ ಹೋಗಲು ರಸ್ತೆ ದಾಟುತ್ತಿದ್ದ ವೇಳೆ ಕುಂಬ್ರದಿMದ ಪುತ್ತೂರು ಕಡೆಗೆ ಪೆರಿಗೇರಿಯ ಕೃಷ್ಣ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಡಿಕ್ಕಿಯಾಗಿದೆ. ಈ ವೇಳೆ ವಿದ್ಯಾರ್ಥಿನಿ ನೆಲಕ್ಕೆ ಬಿದ್ದು ಕೈ ಹಾಗೂ ಕಾಲಿಗೆ ಗಾಯಗಳಾಗಿದ್ದು ತಕ್ಷಣವೇ ಅವರನ್ನು ಕುಂಬ್ರದ ರಿಕ್ಷಾ ಚಾಲಕರಾದ ರಫೀಕ್ ಕಡ್ತಿಮಾರ್ ಮತ್ತು ನಿಝಾರ್‌ ತಮ್ಮ ರಿಕ್ಷಾದಲ್ಲಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಗಾಯಾಳು ಪುತ್ತೂರಿನ ಹಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here