ಗ್ರಾಮೀಣ ಭಾಗದಲ್ಲಿ ಪಕ್ಷದ ಬಲವರ್ಧನೆ ಅತೀ ಅಗತ್ಯವಾಗಿದೆ: ಶಾಸಕ ಅಶೋಕ್ ರೈ
ವಿಟ್ಲ: ಪೆರುವಾಯಿ ವಲಯ ಕಾಂಗ್ರೆಸ್ ನ ನೂತನ ಕಚೇರಿಯನ್ನು ಶಾಸಕರಾದ ಅಶೋಕ್ ರೈ ಯವರು ಉದ್ಘಾಟಿಸಿದರು. ಕಾನಾ ಕಾಂಪ್ಲೆಕ್ಸ್ ನಲ್ಲಿರುವ ಪೆರುವಾಯಿ ವಲಯ ಕಾಂಗ್ರೆಸ್ ಸಮಿತಿಯ ನೂತನ ಕಚೇರಿಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅಶೋಕ್ ರೈ ಪೆರುವಾಯಿ ವಲಯ ಕಾಂಗ್ರೆಸ್ ಕಾರ್ಯಕರ್ತರು ಎಲ್ಲರಿಗೂ ಮಾದರಿಯಾಗಿದ್ದಾರೆ. ಗ್ರಾಮದಲ್ಲಿ ಪಕ್ಷದ ಕಚೇರಿಯನ್ನು ಆರಂಭಿಸುವ ಮೂಲಕ ಕಾರ್ಯಕರ್ತರ ಹುರಿದುಂಬಿಸುವ ಕೆಲಸವನ್ನು ಮಾಡಿದ್ದು ಶ್ಲಾಘನೀಯ. ಪ್ರತೀ ವಲಯ ಮಟ್ಟದಲ್ಲೂ ಪಕ್ಷದ ಕಚೇರಿಯನ್ನು ಆರಂಭಿಸುವ ಮೂಲಕ ಪಕ್ಷದ ಯೋಜನೆಗಳು, ಸರಕಾರದ ಯೋಜನೆಗಳು ಗ್ರಾಮದ ಕಟ್ಟಕಡೇಯ ವ್ಯಕ್ತಿಗೂ ತಲುಪಿಸಲು ಸಾಧ್ಯವಾಗಲಿದೆ. ಸಮಸ್ಯೆಗಳು ಬಂದಾಗ ಕಚೇರಿಗೆ ಬಂದು ಪಕ್ಷದ ನಾಯಕರುಗಳ ಜೊತೆ ಚರ್ಚೆ ನಡೆಸಿ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು. ಗ್ರಾಮ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಮೂಲಕ ಮುಂದಿನ ದಿನಗಳಲ್ಲಿ ಪಕ್ಷವನ್ನು ಗಟ್ಟಿಗೊಳಿಸಬೇಕಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪೆರುವಾಯಿ ಗ್ರಾಮದ ಅನೇಕ ಮಂದಿ ಬಿಜೆಪಿ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಶಾಸಕರು ಪಕ್ಷದ ದ್ವಜವನ್ನು ನೀಡಿ ಬರಮಾಡಿಕೊಂಡರು.
ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ರವರು ಮಾತನಾಡಿ ಪೆರುವಾಯಿ ಗ್ರಾಮ ಕಾಂಗ್ರೆಸ್ ಭದ್ರಕೋಟೆಯಾಗಿದೆ.ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಪಡಿಸಲು ಕಚೇರಿ ಸಹಾಯವಾಗಲಿದೆ ಎಂದು ಹೇಳಿದರು. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಪಕ್ಷವನ್ನು ಬಲಪಡಿಸಬೇಕಾಗಿರುವುದು ಇಂದಿನ ಅಗತ್ಯವಾಗಿದೆ.ಸರಕಾರದ ಗ್ಯಾರಂಟಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವಲ್ಲಿ ಗ್ರಾಮದ ಕಾಂಗ್ರೆಸ್ ಕಚೇರಿ ಸಹಕಾರಿಯಾಗಲಿದೆ ಎಂದು ಹೇಳಿದರು.
ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂದಬೆಟ್ಟು, ವಿಟ್ಟ ಪಂಚಾಯತ್ ಮಾಜಿ ಅಧ್ಯಕ್ಷರಾದ ರಮಾನಾಥ್ ವಿಟ್ಲ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಅಬ್ದಲ್ ಕೆರೀಂ ಕುದ್ದುಪದವು, ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ ಬಾಳೆಕಲ್ಲು, ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೆಬಿಸ, ಪೆರುವಾಯಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪಂಚಪಾಲ ಶೆಟ್ಟಿ, ಯುವ ಕಾಂಗ್ರೆಸ್ ಅದ್ಯಕ್ಷರಾದ ಸಮೀರ್ ಬದಿಯಾರು, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಂದ್ರನಾಥ ರೈ ಗುತ್ತು, ಮಾಲತಿ, ಕುಮಾರಿ ರಶ್ಮಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪುಷ್ಪಲತಾ ಎಂ ಶೆಟ್ಟಿ, ದ. ಕ. ಜಿಲ್ಲಾ ಅಲ್ಪಸಂಖ್ಯಾತ ಘಟಕದ ಸಂಯೋಜಕರು ಅಶೋಕ್ ಡಿಸೋಜ ಮುಳ್ಳೆಚ್ಚಿ, ದ. ಕ. ಕ ಜಿಲ್ಲಾ ಕಾಂಗ್ರಸ್ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ರಂಜಿತ್ ಮಾರ್ಲ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾರ್ಯದರ್ಶಿ ಸಿದ್ಧಿಕ್ ಪೆರುವಾಯಿ, ಬೂತ್ ಅಧ್ಯಕ್ಷರು ಆದ ಗೋಪಾಲ ನಾಯ್ಕ, ಮಹಮ್ಮದ್ ಕೆ ಮಾಜಿ ಸದಸ್ಯರಾದ ಅಬ್ದುಲ್ ಖಾನ, ಜೋನ್ಸನ್ ಮೊಂತೇರೊ, ಹನೀಫ್ ಮುಚ್ಚಿರಪದವು, ಮಾಣೀಲದ ಹಿರಿಯ ಕಾರ್ಯಕರ್ತ ಜಯರಾಮ್ ಬಳ್ಳಾಲ್ ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಂಗ್ರಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಲೋಕೇಶ್ ಕೊಲ್ಲತ್ತಡ್ಕ, ನಾರಾಯಣ ಅಶ್ವಥನಗರ, ಸರಸ್ವತಿ ಆನಂದ ನಾಯ್ಕ, ಗೋಪಾಲನಾಯ್ಕ, ಚಂದ್ರಾವತಿ ಸಹಿತ ಕೆಲವರು ಕಾಂಗ್ರೆಸ್ ಗೆ ಸೇರ್ಪಡೆಗೊಂಡರು. ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದ ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ ದಿ. ತಿಮ್ಮಪ್ಪ ಪಾಟಾಳಿಯವರಿಗೆ ಪಕ್ಷದ ವತಿಯಿಂದ ಸಂಗ್ರಹಿಸಲಾದ ಸಹಾಯ ನಿಧಿಯನ್ನು ಶಾಸಕರು ಅವರ ಪತ್ನಿ ಉಮಾವತಿಯವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದ ಅತಿಥಿಗಳನ್ನು ಗ್ರಾ. ಪಂ. ಸದಸ್ಯರಾದ ರಾಜೇಂದ್ರನಾಥ ರೈ ಗುತ್ತು ಇವರು ಸ್ವಾಗತಿಸಿದರು. ರಶ್ನಿ ಪ್ರಾರ್ಥಿಸಿದರು. ರಹಿಮಾನ್ ಖಾನ್ ಕಾರ್ಯಕ್ರಮ ನಿರೂಪಿಸಿದರು.