ನರಿಮೊಗರು ಸಾಂದೀಪನಿಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ

0

ಪುತ್ತೂರು:ನರಿಮೊಗರು ಸಾಂದೀಪನಿ ಗ್ರಾಮೀಣ ಶಿಕ್ಷಣ ಸಂಸ್ಥೆಯಲ್ಲಿ ಸವಣೂರು ವಲಯ ಮಟ್ಟದ ಪ್ರತಿಭಾ ಕಾರಂಜಿ 2023-24 ವಿವಿಧ ಸ್ಪರ್ಧೆಗಳೊಂದಿಗೆ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಮೇಶ್ ಎಂ ಮಾತನಾಡಿ ತೀರ್ಪಿನಲ್ಲಿ ಯಾವುದೇ ಮೋಸವಾಗಬಾರದು ನಿಷ್ಕಳಂಕ, ನಿಷ್ಕಲ್ಮಶ ತೀರ್ಪುಗಾರರು ಇರಲಿ. ಗ್ರಾಮೀಣ ಮಕ್ಕಳ ಪ್ರತಿಭೆ ದೇಶ ವಿದೇಶ ಗಳಲ್ಲಿ ಪ್ರಜ್ವಲನಗೊಳ್ಳಲಿ ಎಂದರು.

ಮುಖ್ಯ ಅತಿಥಿ ಸುಧಾಕರ್ ಕುಲಾಲ್ ಮಾತನಾಡಿ ಪ್ರತಿಭಾ ಕಾರಂಜಿಯಿಂದ ಜನಪದ ಕಲೆಗಳಿಗೆ ಆದ್ಯತೆ ನೀಡುವಂತೆ ಕರೆ ಕೊಟ್ಟರು. ಸ್ಪರ್ದಿಗಳು ಮುಂದೆಯೂ ವಿಜಯಿಗಳಾಗಿ ಕೀರ್ತಿ ತರಲಿ ಎಂದರು.

ಜಯರಾಮ ಕೆದಿಲಾಯ ಅಧ್ಯಕ್ಷತೆ ವಹಿಸಿದ್ದರು, ಗ್ರಾಮ ಪಂಚಾಯತ್ ಸದಸ್ಯೆ ನಳಿನಿ ರೈ, ಅಕ್ಷರದಾಸೋಹ ನಿರ್ದೇಶಕ ವಿಷ್ಣು ಪ್ರಸಾದ್, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ, ದೈಹಿಕ ಶಿಕ್ಷಕರ ಸಂಘದ ಕಾರ್ಯಧ್ಯಕ್ಷ ಮಾಮಚ್ಚನ್ , ಪುತ್ತೂರು BRP ರತ್ನ ಕುಮಾರಿ ,ನರಿಮೊಗರು CRP ಪರಮೇಶ್ವರಿ ಪ್ರಸಾದ್, ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್, ಕಾರ್ಯದರ್ಶಿ ಕೃಷ್ಣಪ್ರಸಾದ ಕೆದಿಲಾಯ, ಸದಸ್ಯ ಹರೀಶ್ ಪುತ್ತೂರಾಯ , ಹಾಗೂ ವಿವಿಧ ಶಾಲೆಯಿಂದ ಬಂದ ತೀರ್ಪುಗಾರರು, ಮುಖ್ಯಗುರುಗಳು, ಶಿಕ್ಷಕರು ,ಸ್ಪರ್ಧಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಧಿಕಾರಿ ಲೋಕೇಶ್ ಎಸ್ ಆರ್ ಮಾತನಾಡಿ ಪ್ರತಿಭೆಗಳು ಅನಾವರಣಗೊಂಡು ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಜನಪದ ಕಲೆಗಳು ಮುಂದಿನ ಪೀಳಿಗೆಗೆ ಹಸ್ತಾಂತರ ವಾಗಬೇಕು. ಈ ಕಾರ್ಯಕ್ರಮಗಳು ಮಗುವಿನ ದೈಹಿಕ, ಮಾನಸಿಕ, ಬೆಳವಣಿಗೆಗೆ ಸಹಕಾರಿಯಾಗಿದೆ. ಮಗುವಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂದು ಗುರುತಿಸಲು ಇದೊಂದು ವೇದಿಕೆ ಎಂದರು.ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ ಮಕ್ಕಳಲ್ಲಿರುವ ಶ್ರೇಷ್ಠ ಗುಣಗಳನ್ನು ಗುರುತಿಸುವುದು ಮತ್ತು ಬೆಳೆಸುವುದು ಇಲಾಖೆ ಮತ್ತು ಶಿಕ್ಷಕರ ಜವಾಬ್ದಾರಿ ಎಂದರು.

ಶಾಲಾ ವಿದ್ಯಾರ್ಥಿಗಳಾದ ಅಕ್ಷರ, ವರ್ಷ ,ಲಕ್ಷ್ಮಿ ಹಂಸಿಕ ಪ್ರಾರ್ಥಿಸಿದರು. ಶಾಲಾ ಮುಖ್ಯೋಪಾಧ್ಯಾಯನಿ ಜಯಮಾಲಾ ವಿ ಎನ್ ಸ್ವಾಗತಿಸಿ, ಪ್ರಮೀಳಾ ವಂದಿಸಿದರು,

LEAVE A REPLY

Please enter your comment!
Please enter your name here