





ಪುತ್ತೂರು: ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಛೇರಿಯ ಮುಂಭಾಗದಲ್ಲಿ ತಂಡದೊಂದಿಗೆ ಬಂದ ಯುವಕರೊಬ್ಬರು ತಲವಾರು ಪ್ರದರ್ಶನ ಮಾಡಿ ಬೆದರಿಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಪ್ರಾಪ್ತರು ಸಹಿತ 9 ಮಂದಿಯ ವಿರುದ್ಧ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಾಂತಿಗೋಡು ಗ್ರಾಮದ ದಿನೇಶ್ ಪಂಜಿಗ (38ವ), ನರಿಮೊಗರು ಗ್ರಾಮದ ಭವಿತ್ (19ವ), ಬೊಳುವಾರು ನಿವಾಸಿ ಮನ್ವಿತ್ (18ವ), ಚಿಕ್ಕಮುಡ್ನೂರು ಗ್ರಾಮದ ಜಯಪ್ರಕಾಶ್ (18ವ), ಚಿಕ್ಕಮುಡ್ನೂರು ಗ್ರಾಮದ ಚರಣ್ (23ವ), ಬನ್ನೂರು ಗ್ರಾಮದ ಮನೀಶ್ (23 ವ), ಕಸಬ ಗ್ರಾಮದ ವಿನೀತ್ (19 ವ) ಸಹಿತ ಇಬ್ಬರು ಅಪ್ರಾಪ್ತ ಪ್ರಾಯದ ಬಾಲಕರನ್ನು ಪೊಲಿಸರು ವಶಕ್ಕೆ ಪಡೆದು ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 108 ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ವದಂತಿಗಳಿಗೆ ಕಿವಿಗೊಡದಿರಿ:
ಘಟನೆ ಕುರಿತು ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಹಾಗೂ ಸುಳ್ಳು ವದಂತಿಗಳನ್ನು ಪ್ರಸಾರ ಮಾಡದಿರಲು ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರು ವಿನಂತಿಸಿದ್ದಾರೆ.









