ಕಬಡ್ಡಿ ಪಂದ್ಯಾಟ: ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲಾ ಬಾಲಕಿಯ ತಂಡ ರಾಜ್ಯಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಅರಸಿಕೆರೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟದ ಬಾಲಕಿಯ ವಿಭಾಗದಲ್ಲಿ ದರ್ಬೆ ಲಿಟ್ಲ್ ಫ್ಲವರ್ ಶಾಲಾ ಬಾಲಕಿಯರ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಕಳೆದ ಬಾರಿಯ ಶೈಕ್ಷಣಿಕ ಸಾಲಿನಲ್ಲಿ ಶಾಲೆಯಿಂದ ಓರ್ವ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಈ ಭಾರಿ ಶಾಲಾ ಪೂರ್ಣ ತಂಡವು ಪ್ರಥಮವಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ವಿದ್ಯಾರ್ಥಿಗಳಾದ ಜುವೆನ್ನಾ ಡಾಝಲ್ ಕುಟಿನ್ಹಾ, ಸನ್ನಿಧಿ, ಹಾರ್ದಿಕಾ, ಧನ್ವಿ, ಜಸ್ಮಿತಾ, ಸುಶ್ರಾವ್ಯ, ವಿಜೇತ, ಹರ್ಷಿಣಿ, ದೀಕ್ಷಾ, ಶಾಹಿದಾ, ಲಕ್ಷö್ಯ, ದರ್ಶಿಣಿ, ಗಗನ ಹಾಗೂ ಜೆನಿಟಾ ಸಿಂಧು ಪಸನ್ನ ಹಾಗೂ ಕೃತಿಕಾ ತಂಡದಲ್ಲಿದ್ದರು. ಮುಖ್ಯ ಶಿಕ್ಷಕಿ ಭಗಿನ ವೆನಿಶಾ ಬಿ.ಎಸ್ ಮಾರ್ಗದರ್ಶನದಲ್ಲಿ ಸಹ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಹಾಗೂ ಮಹಮ್ಮದ್ ಹಬೀಬ್, ಶಿಲ್ಪಾ ಡಿ ಸೋಜ, ಸುಚೇತ್ ದುರ್ಗಾನಗರ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here