ನಾಳೆ(ನ.12): ಚಂದನ ವಾಹಿನಿಯಲ್ಲಿ ಅಂಬರ ಮರ‍್ಲೆರ್

0

ಪುತ್ತೂರು: ಅರ್ನ ಕ್ರಿಯೇಷನ್ಸ್ ಅರ್ಪಿಸುವ, ರಂಗದರಾಜೆ ಸುಂದರ ರೈ ಮಂದಾರ ಕಥೆ, ನಿರ್ಮಾಣ, ಪ್ರಧಾನ ನಿರ್ದೇಶನದಲ್ಲಿ ಮೂಡಿಬಂದಿರುವ ಈಗಾಗಲೇ ಕೋಟ್ಯಾಂತರ ಜನರ ಮನಸ್ಸು ಗೆದ್ದಿರುವ ತುಳು ಸೂಪರ್ ಹಿಟ್ ಕಾಮಿಡಿ ಧಾರಾವಾಹಿ ಅಂಬರ ಮರ‍್ಲೆರ್ ನ.12ರಂದು ಮಧ್ಯಾಹ್ನ 1.30ಕ್ಕೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಪ್ರಜ್ವಲ್ ಅತ್ತಾವರ ಸಂಚಿಕೆ ನಿರ್ದೇಶನದಲ್ಲಿ ಪಟ್ಟೆ ರಾಧಾಕೃಷ್ಣ ರೈಯವರ ಮನೆ ಹಾಗೂ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ನಾಳಿನ ಸಂಚಿಕೆಯಲ್ಲಿ ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ, ರವಿ ರಾಮಕುಂಜ, ರೂಪ ವರ್ಕಾಡಿ, ರಾಧಾಕೃಷ್ಣ ರೈ ಸಹಿತ ಹಲವು ಕಲಾವಿದರ ಅಭಿನಯಿಸಿದ್ದಾರೆ.


LEAVE A REPLY

Please enter your comment!
Please enter your name here