ಕುಂಬ್ರ ಸುಶಾ ಡ್ರೆಸ್ಸಸ್ ದಶಮಾನೋತ್ಸವ ಸಂಭ್ರಮ, ಧನಲಕ್ಷ್ಮೀ ಪೂಜೆ, ವಿಶೇಷ ಆಫರ್

0

ಪುತ್ತೂರು: ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಶಾ ಡ್ರೆಸ್ಸಸ್, ಫ್ಯಾನ್ಸಿ, ಬುಕ್ಸ್ ಮತ್ತು ಸ್ಟೇಷನರಿ ಶಾಫ್ 11 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಸುಶಾ ದಶ ಮಾನೋತ್ಸವ ಸಂಭ್ರಮ ಹಾಗೂ ದೀಪಾವಳಿ ಧನಲಕ್ಷ್ಮೀ ಪೂಜಾ ಕಾರ್ಯಕ್ರಮ ನ.13 ರಂದು ಬೆಳಿಗ್ಗೆ ನಡೆಯಿತು. ಶ್ರೀಕೃಷ್ಣ ಉಪಾಧ್ಯಾಯ ಪಟ್ಲಮೂಲೆಯವರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಧನಲಕ್ಷ್ಮೀ ಪೂಜೆ ನಡೆಸಿಕೊಟ್ಟರು. ಶಾಫ್‌ನ ಮಾಲಕ ಸುರೇಶ್ ಕುಮಾರ್ ತಿಂಗಳಾಡಿ ಗ್ರಾಹಕರನ್ನು ಬರಮಾಡಿಕೊಂಡು ಪ್ರಸಾದ ನೀಡಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಅಕ್ಷತಾ ಸುರೇಶ್, ಚಾರ್ವಿ, ಹೇತಾಂಶ್ವಿ, ಸಿಬ್ಬಂದಿಗಳಾದ ಪೂಜಾಶ್ರೀ, ಹರೀಶ್, ಜಯಶ್ರೀ ಉಪಸ್ಥಿತರಿದ್ದರು. ನೂರಾರು ಮಂದಿ ಗ್ರಾಹಕರು, ಹಿತೈಷಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.


ರೆಡಿಮೇಡ್ ಬಟ್ಟೆಗಳ ಮೇಲೆ ಭಾರೀ ಆಫರ್
ಸುಶಾ ಡ್ರೆಸ್ಸಸ್‌ನ ದಶಮಾನೋತ್ಸವ ಸಂಭ್ರಮ ಹಾಗೂ ದೀಪಾವಳಿ ಹಬ್ಬದ ಸಲುವಾಗಿ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೆಡಿಮೇಡ್ ಬಟ್ಟೆಗಳ ಮೇಲೆ ಭಾರೀ ಡಿಸ್ಕೌಂಟ್ ನೀಡಲಾಗಿದೆ. ಶೇ.5 ರಿಂದ 20 ರತನಕ ಕೆಲವೇ ದಿನಗಳಿಗೆ ಭಾರೀ ರಿಯಾಯಿತಿ ನೀಡಲಾಗಿದೆ. ಸುಶಾ ಡ್ರೆಸ್ಸಸ್‌ನಲ್ಲಿ ಎಲ್ಲಾ ತರದ ಮಕ್ಕಳ, ಪುರುಷರ, ಮಹಿಳೆಯರ ನವನವೀನ ಬಟ್ಟೆಗಳ ಬೃಹತ್ ಸಂಗ್ರಹವಿದ್ದು ಇದಲ್ಲದೆ ಫ್ಯಾನ್ಸಿ ಐಟಮ್‌ಗಳು ದೊರೆಯುತ್ತದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here