ಆಲಂಕಾರು: ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಕೃಷ್ಣಪ್ಪ ನಿಧನ

0

ಆಲಂಕಾರು: ಆಲಂಕಾರು ಗ್ರಾಮದ ಕೋಡಿಲ ದಿ.ಚೋಮ ಮುಗೇರ ಎಂಬವರ ಪುತ್ರ ಕೃಷ್ಣಪ್ಪ(45.ವ) ನ.13ರಂದು ನಿಧನರಾಗಿದ್ದಾರೆ. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಕೃಷ್ಣಪ್ಪ ಆಲಂಕಾರು ಗ್ರಾಮದ ಬೂತ್ ಸಂಖ್ಯೆ 59ರ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾಗಿ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ರಮ್ಯಾ, ಮಕ್ಕಳಾದ ಕೀರ್ತನ್ ಮತ್ತು ಯಜ್ಞೇಶ್ ಅವರನ್ನು ಅಗಲಿದ್ದಾರೆ.

ಮೃತರ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ,ಸುಳ್ಯ ಮಂಡಲ ಪ್ರದಾನ ಕಾರ್ಯದರ್ಶಿ ರಾಕೇಶ್ ರೈ ಕಡೆಂಜಿ, ಮಹಾಶಕ್ತಿಕೇಂದ್ರದ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಸದಾನಂದ ಆಚಾರ್ಯ, ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ, ಉಪಾಧ್ಯಕ್ಷ ರವಿ ಪೂಜಾರಿ, ರಾಮಕುಂಜ ಗ್ರಾ.ಪಂ ಉಪಾಧ್ಯಕ್ಷ ಕೇಶವ ಗಾಂಧಿಪೇಟೆ ಸೇರಿದಂತೆ ಹಲವು ಬಿ.ಜೆ.ಪಿ ಮುಖಂಡರು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.

LEAVE A REPLY

Please enter your comment!
Please enter your name here