ಕುಂಬ್ರ ಸುಶಾ ಡ್ರೆಸ್ಸಸ್ ದಶಮಾನೋತ್ಸವ, ಪ್ರಜ್ಞಾ ಆಶ್ರಮಕ್ಕೆ ವಸ್ತ್ರದಾನ

0

ಪುತ್ತೂರು: ಕುಂಬ್ರದ ಶಾಲಾ ಬಳಿಯ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಶಾ ಡ್ರೆಸ್ಸಸ್,ಫ್ಯಾನ್ಸಿ, ಬುಕ್ಸ್ ಮತ್ತು ಸ್ಟೇಷನರಿ ಶಾಫ್ 10 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸುಶಾ ದಶಮಾನೋತ್ಸವವನ್ನು ನ.13ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸುಶಾ ಮಾಲಕ ಸುರೇಶ್ ಕುಮಾರ್ ತಿಂಗಳಾಡಿಯವರು ಪುತ್ತೂರು ಬೀರಮಲೆಯ ಪ್ರಜ್ಞಾ ವಿಶೇಷ ಚೇತನರ ಆಶ್ರಮಕ್ಕೆ ವಸ್ತ್ರದಾನ ಮಾಡುವ ಮೂಲಕ ತಮ್ಮ ಸಂಸ್ಥೆಯ ದಶಮಾನೋತ್ಸವವನ್ನು ಆಚರಿಸಿಕೊಂಡರು. ಆಶ್ರಮದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಣ್ಣಪ್ಪರವರು ಸ್ವಾಗತಿಸಿ ಧನ್ಯವಾದ ತಿಳಿಸಿದರು.
‘ಸುಶಾ ದಶಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾದ ಸಮಸ್ತ ಗ್ರಾಹಕ ಬಂಧುಗಳಿಗೆ ಕೃತಜ್ಞತೆಗಳೊಂದಿಗೆ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.
ಸುರೇಶ್ ಕುಮಾರ್ ತಿಂಗಳಾಡಿ,
ಮಾಲಕರು ಸುಶಾ ಡ್ರೆಸ್ಸಸ್ ಕುಂಬ್ರ

LEAVE A REPLY

Please enter your comment!
Please enter your name here