ಸರ್ವೆ ಗೋಪಿಕಾ ಹೋಟೆಲ್,ಫಾಸ್ಟ್ ಫುಡ್ ಮತ್ತು ಜ್ಯೂಸ್ ಸೆಂಟರ್ ಶುಭಾರಂಭ- ಲಕ್ಷ್ಮೀ ಪೂಜೆ

0

ಪುತ್ತೂರು: ಸರ್ವೆ ಮುಖ್ಯರಸ್ತೆಯಲ್ಲಿರುವ ಗೋಪಿಕಾ ಟ್ರೇಡರ‍್ಸ್‌ನಲ್ಲಿ ಲಕ್ಷ್ಮೀ ಪೂಜೆ ಹಾಗೂ ಗೋಪಿಕಾ ಹೋಟೆಲ್, ಫಾಸ್ಟ್ ಫುಡ್ ಮತ್ತು ಜ್ಯೂಸ್ ಸೆಂಟರ್ ಇದರ ಪ್ರಾರಂಭೊತ್ಸವ ನ.12 ರಂದು ಬೆಳಿಗ್ಗೆ ನಡೆಯಿತು. ಪುರೋಹಿತರಾದ ಶ್ರೀರಾಮ ಕಲ್ಲುರಾಯ ಲಕ್ಷ್ಮೀ ಪೂಜೆ ನೆರವೇರಿಸಿದರು. ಸವಣೂರು ವಿದ್ಯಾರಶ್ಮೀ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿ ಸಂಸ್ಥೆಯ ಯಶಸ್ಸಿಗೆ ಶುಭಹಾರೈಸಿದರು.

ಸವಣೂರು ವಿದ್ಯಾರಶ್ಮೀ ವಿದ್ಯಾಲಯದ ಅಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ, ಮುಂಡೂರು ಸಿ.ಎ.ಬ್ಯಾಂಕಿನ ನಿರ್ದೇಶಕರಾದ ಶಿವನಾಥ ರೈ ಮೇಗಿನಗುತ್ತು, ಪ್ರವೀಣ್ ಎಸ್.ಡಿ.,ಗಣಪತಿ ಭಟ್ ಮುಂಡೂರು, ಆನಂದ ಸವಣೂರು ಮತ್ತಿತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರ ಪತ್ನಿ ಪಾರ್ವತಿ ಸುಮ, ಪುತ್ರರಾದ ಶಶನ್ ರಾಮ್, ಶಮನ್ ಕೃಷ್ಣ ಬಂದ ಗ್ರಾಹಕರನ್ನು ಸ್ವಾಗತಿಸಿ ಸತ್ಕರಿಸಿದರು.


ಗೃಹೋಪಯೋಗಿ ಸಾಮಾನುಗಳಾದ ದಿನಸಿ, ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್, ಪೂಜಾ ಸಮಾಗ್ರಿಗಳು, ಕೃಷಿ ಉಪಕರಣಗಳು, ಹಾರ್ಡ್‌ವೇರ್ ಸ್ಟೇಷನರಿ ಇತ್ಯಾದಿಗಳನ್ನು ಮಾರಾಟ ಮಾಡುತ್ತಿರುವ ಗೋಪಿಕಾ ಟ್ರೇಡರ‍್ಸ್‌ನಲ್ಲಿ ಇನ್ನು ಮುಂದೆ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗೋಪಿಕಾ ಹೋಟೆಲ್ ಫಾಸ್ಟ್ ಫುಡ್ ಮತ್ತು ಜ್ಯೂಸ್ ಸೆಂಟರ್ ನ್ನು ಪ್ರಾರಂಭಿಸಿದ್ದೇವೆ ಇಲ್ಲಿ ಆಹಾರವನ್ನು ಉತ್ತಮ ಗುಣಮಟ್ಟದೊಂದಿಗೆ, ಶುಚಿರುಚಿಯಾಗಿ ಮಿತದರದಲ್ಲಿ ನೀಡಲಿದ್ದೇವೆ. ಗ್ರಾಹಕರು ಇದರ ಸದುಪಯೋಗ ಪಡೆದು ಸಹಕರಿಸಬೇಕೆಂದು ಸಂಸ್ಥೆಯ ಮಾಲಕರಾದ ಶಿವರಾಮ ಭಟ್ ತಿಳಿಸಿದರು.

LEAVE A REPLY

Please enter your comment!
Please enter your name here