ನಾಣಿಲ ಶಾಲೆಯಲ್ಲಿ ಮಕ್ಕಳ ದಿನಾಚರಣೆ

0

ಕಾಣಿಯೂರು: ದ.ಕ.ಹಿ.ಪ್ರಾಥಮಿಕ ಶಾಲೆ ನಾಣಿಲದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಮುಖ್ಯಮಂತ್ರಿಯಾದ ಗಗನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಖ್ಯಗುರು ಪದ್ಮಯ ಗೌಡ, ಆರನೇ ತರಗತಿಯ ಕಾವ್ಯ, 5ನೇ ತರಗತಿಯ ದೀಕ್ಷಾ, ನಾಲ್ಕನೇ ತರಗತಿಯ ಮೋಕ್ಷಿತಾ, ಮೂರನೇ ತರಗತಿಯ ರಿತ್ವಿ, ಎರಡನೇ ತರಗತಿಯ ನಿಶ್ಮಿತಾ, ಒಂದನೇ ತರಗತಿಯ ಚಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿ ಉಪಾಧ್ಯಕ್ಷರಾದ ಕುಸುಮಾವತಿ, ಸದಸ್ಯರಾದ ವಸಂತ ಮುಂಗಳಿಮನೆ, ದಿನೇಶ್ ಕುಕುನಡ್ಕ, ಲತಾ ಶುಭಹಾರೈಸಿದರು. ನಾಲ್ಕನೇ ತರಗತಿಯ ಶೌರ್ಯ ಮತ್ತು ಮೂರನೇ ತರಗತಿಯ ವರ್ಷಿಕ ಡಿ.ವಿ ಪ್ರಾರ್ಥಿಸಿದರು. 7ನೇ ತರಗತಿಯ ಶ್ರೇಯ ಸ್ವಾಗತಿಸಿ, 6ನೇ ತರಗತಿಯ ಅಶ್ಮಿ ತ ವಂದಿಸಿದರು. ಆರನೇ ತರಗತಿಯ ವಂಶಿಕ ಡಿ.ವಿ ಕಾರ್ಯಕ್ರಮವನ್ನು ನಿರೂಪಿಸಿದರು ಕಾರ್ಯಕ್ರಮದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here