ನ.17: ಪುತ್ತೂರು ಟೌನ್ ಹಾಲ್‌ನಲ್ಲಿ ಸಾರ್ವಜನಿಕ ಸೀರತ್ ಸಮಾವೇಶ

0

ಪುತ್ತೂರು: ಅರಬ್ ನಾಡಿನಲ್ಲಿ ಜನಿಸಿದ ಪೈಗಂಬರ್ ಮಹಮ್ಮದ್(ಸ) ಸಮಾನತೆಯ ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ರಕ್ಷಕರಾಗಿ ಕಾಣಿಸಿಕೊಂಡರೆ, ಸ್ವಾಮೀ ವಿವೇಕಾನಂದ, ಶ್ರೀ ನಾರಾಯಣ ಗುರು, ಮಹಾತ್ಮಗಾಂಧಿ, ಡಾ| ಅಂಬೇಡ್ಕರ್ ಅವರು ಸಮಾಜದಲ್ಲಿ ಬೇರೂರಿದ ಅಸಮಾನತೆಯನ್ನು ಕಿತ್ತು ಹಾಕಿ ಮಾನವ ಘನತೆಯನ್ನು ಎತ್ತಿ ಹಿಡಿದ ಮೇಧಾವಿಗಳು. ಈ ಚಿಂತನೆ ಇಂದಿನ ಸಮಾಜಕ್ಕೆ ಅತೀ ಅಗತ್ಯವಾಗಿರುವ ನಿಟ್ಟಿನಲ್ಲಿ ’ದೇಶದ ಹಿತಚಿಂತನೆ’ ಎಂಬ ಶೀರ್ಷಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ದಕ್ಷಿಣ ಕನ್ನಡ ವತಿಯಿಂದ ನ.17ರಂದು ಪುತ್ತೂರಿನ ಟೌನ್‌ಹಾಲ್‌ನಲ್ಲಿ ಸೀರತ್ ಸಮಾವೇಶ ನಡೆಯಲಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ದಕ್ಷಿಣ ಕನ್ನಡ ಇದರ ಮಂಗಳೂರು ವಲಯ ಉಪಸಂಚಾಲಕ ಅಮೀನ್ ಅಹ್ಸನ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಮಾಜಿ ಶಾಸಕ ಸಂಜೀವ ಮಠಂದೂರು, ಜಮಾಅತೇ ಇಸ್ಲಾಮೀ ಹಿಂದ್ ಮಂಗಳೂರು ಇದರ ಅಧ್ಯಕ್ಷ ಮುಹಮ್ಮದ್ ಇಸ್ಹಾಕ್ ಅತಿಥಿಯಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್ ದ್ವಾರಕನಾಥ್ ಅವರು ಗಾಂಧೀಜಿಯವರ ಕುರಿತು, ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಸ್ವಾಮೀ ವಿವೇಕಾನಂದ ಅವರ ಕುರಿತು, ಜಮಾಅತೆ ಇಸ್ಲಾಮೀ ಹಿಂದ್ ಇದರ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಕುಂಞಿ ಅವರು ಪ್ರವಾದಿ ಮುಹಮ್ಮದ್ ಅವರ ಕುರಿತು, ಯುವವಾಹಿನಿ ಕೇದ್ರೀಯ ಸಮಿತಿ ಮಾಜಿ ಅಧ್ಯಕ್ಷ ಡಾ|ರಾಜಾರಾಮ್ ಕೆ.ಬ ಅವರು ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಮಾಅತೇ ಇಸ್ಲಾಮೀ ಹಿಂದ್ ಇದರ ವಿಟ್ಲ ಅಧ್ಯಕ್ಷ ಹೈದರ್ ಅಲಿ ನೀರ್ಕಜೆ, ಸಂಚಾಲಕ ಇಬ್ರಾಹಿಂ ಬನ್ನೂರು, ಸಮಾವೇಶದ ಸಂಚಾಲಕ ರಿಯಾಝ್ ಹಾರೂನ್, ಪುತ್ತೂರು, ಸಮಾವೇಶದ ಉಪಸಂಚಾಲಕ ಅಬ್ದುಲ್ ಮಜೀದ್ ಕೆ.ಪಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here