ಗ್ರಾಹಕರ ಸಂತೃಪ್ತಿಯೊಂದಿಗೆ ಆರಂಭಗೊಂಡ ಉದ್ಯಮ ಯಶಸ್ವಿಯಾಗಲಿ-ಸವಣೂರು ಸೀತಾರಾಮ ರೈ
ಪುತ್ತೂರು: ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಹಳ್ಳಿ ಸೊಗಡಿನ ಶುಚಿ-ರುಚಿಯಾದ ಖಾದ್ಯಗಳ, ಆರೋಗ್ಯದಾಯಕ ಪಾನೀಯಗಳ ತಾಜಾ ಸಸ್ಯಾಹಾರಿ ಹೊಟೇಲ್ ಸೆಲ್ಫ್ ಸರ್ವಿಸ್ ಒಳಗೊಂಡ ‘ಫ್ಯೂರ್ ವೆಜ್ ಹೆರಿಟೇಜ್’ ಪ್ರಶಾಂತ್ ಮಹಲ್ ನಲ್ಲಿ ನ.16ರಂದು ಶುಭಾರಂಭಗೊಂಡಿತು.
ಗ್ರಾಹಕರ ಸಂತೃಪ್ತಿಯೊಂದಿಗೆ ಆರಂಭಗೊಂಡ ಉದ್ಯಮ ಯಶಸ್ವಿಯಾಗಲಿ-ಸವಣೂರು ಸೀತಾರಾಮ ರೈ:
ನೂತನ ಹೊಟೇಲ್ ನ ಮಾರ್ಗದರ್ಶಕರೂ, ಪ್ರಶಾಂತ್ ಮಹಲ್ ಮಾಲಕರೂ ಆಗಿರುವ ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈಯವರು ನೂತನ ವೆಜ್ ರೆಸ್ಟೋರೆಂಟ್ ಅನ್ನು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಬೆಳೆಯುತ್ತಿರುವ ಪುತ್ತೂರನ್ನು ಜಿಲ್ಲೆಯನ್ನಾಗಿ ಹಾಗೂ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆಗಬೇಕು ಎನ್ನುವ ಬೇಡಿಕೆಯಿದ್ದು ಈ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಕಾರ್ಯಪ್ರವೃತ್ತರಾಗಿದ್ದಾರೆ. ಇದರ ಜೊತೆಗೆ ಬೆಳೆಯುತ್ತಿರುವ ಪುತ್ತೂರಿಗೆ ಈ ಫ್ಯೂರ್ ವೆಜ್ ಹೊಟೇಲ್ ಪೂರಕವೆನಿಸಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ, ಉತ್ತಮ ಗುಣಮಟ್ಟದ ಆಹಾರ ಒದಗಿಸಬೇಕು ಎನ್ನುವ ಈ ಹೊಟೇಲ್ ಪಾಲುದಾರರ ಕಾಳಜಿ ಮೆಚ್ಚತಕ್ಕದ್ದು ಎಂದ ಅವರು ಗ್ರಾಹಕರ ಸಂತೃಪ್ತಿಯೇ ನಮ್ಮ ಧ್ಯೇಯದೊಂದಿಗೆ ಆರಂಭಿಸಿದ ಈ ಹೊಟೇಲಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೊಟೇಲಿನ ಆಹಾರವನ್ನು ಸೇವಿಸುವುದರ ಜೊತೆಗೆ ಮಾನಸಿಕ ನೆಮ್ಮದಿ ಕೂಡ ಅನುಭವಿಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಶುಚಿ-ರುಚಿಯಾದ ವಿವಿಧ ಖಾದ್ಯಗಳು:
ರೆಸ್ಟೋರೆಂಟ್ ನಲ್ಲಿ ಬೆಳಗ್ಗಿನ ಬ್ರೇಕ್ ಫಾಸ್ಟ್ ಗೆ ಉಪ್ಪಿಟ್ಟು, ಶೀರ, ಬನ್ಸ್, ಇಡ್ಲಿ ತೋವೆ, ರಸಮ್ ಇಡ್ಲಿ, ರಸಮ್ ವಡ, ರಸಮ್ ಇಡ್ಲಿ ವಡ, ದಹಿ ವಡ, ಪೂರಿ ಬಾಜಿ, ಪೋವ, ಟೊಮೆಟೊ ಆಮ್ಲೇಟ್, ಚೌ ಚೌ ಬಾತ್, ಸ್ಪೆಷಲ್ ಖಾದ್ಯಗಳಾದ ಉಸಲ್ ಪಾವ್, ಮಿಸಲ್ ಪಾವ್, ಡೋಕ್ಲ, ದಬೇಲಿ, ಪತ್ರೋಡೆ, ಗುಳಿಯಪ್ಪ, ಅರೇಪುದಡ್ಡೆ, ಕಲ್ತಪ್ಪ, ನೈಯಪ್ಪ, ಬನ್ ದೋಸಾ, ಸುರ್ನಳಿ ದೋಸಾ, ಮಸಾಲ ಪುಂಡಿ, ಮಸಾಲ ನೀರುದೋಸೆ, ಸಂಜೆ ತಿನಸುಗಳಾದ ಗೋಳಿಬಜೆ, ಒನಿಯನ್ ಬಜೆ, ಕಟ್ ಚಿಲ್ಲಿ, ಆಲೂ ಬೋಂಡ, ವಡಾ ಪಾವ್, ಸಮೋಸ, ಕಟ್ಲೆಟ್, ಪೋಡಿ, ಮದ್ದೂರ್ ವಡೆ, ಅವಲಕ್ಕಿ ವಡೆ, ಚಟ್ಟಂಬಡೆ, ಜ್ಯೂಸ್ ಗಳಾದ ಕೋಲ್ಡ್ ಡ್ರಿಂಕ್ಸ್, ಮಸಾಲ ಬಟರ್ ಮಿಲ್ಕ್, ಮ್ಯಾಂಗೋ ಲಸ್ಸಿ, ಲೈಮ್ ಜ್ಯೂಸ್, ಲೈಮ್ ಸೋಡ, ರೈಸ್ ಡಿಶಸ್ ಗಳಾದ ಬಿಸಿಬೇಳೆ ಬಾತ್, ಟೊಮೇಟೊ ಬಾತ್, ಚಿತ್ರಾನ್ಹಾ, ಲೆಮನ್ ರೈಸ್, ಕೋಕನೆಟ್ ರೈಸ್, ಪುಳಿಯೋಗರೆ, ರಜ್ಮಾ ರೈಸ್, ಪೊಂಗಲ್, ರೈಸ್ ಸಾಂಬಾರ್ ಗಂಜಿ ಊಟ, ವೆಜ್ ಊಟ, ಆರ್ಗ್ಯಾನಿಕ್ ಜ್ಯೂಸ್ ಗಳಾದ ಲಿಂಬೆ ಶುಂಠಿ ಶರಬತ್ತು, ನನ್ನಾರಿ ಶರಬತ್ತು, ಬಂದೆಲಗ ಜ್ಯೂಸ್, ನೆಲ್ಲಿಕಾಯಿ ಜ್ಯೂಸ್, ಸೋರೆಕಾಯಿ ರಸಾಯನ, ಅವಿಲ್ ಮಿಲ್ಕ್, ಜಲ್ಜೀರ ಜ್ಯೂಸ್, ಫ್ರೆಶ್ ವೆಜ್ ಜ್ಯೂಸಸ್, ಬಾಳೆಹಣ್ಣು ರಸಾಯನ, ಟೀ, ಕಾಫಿ, ಕಷಾಯ ಹಾಗೂ ವಿವಿಧ ಬಗೆಯ ತರಕಾರಿಗಳ ಮತ್ತು ಧಾನ್ಯಗಳ ಜ್ಯೂಸ್ ಲಭ್ಯವಿದೆ.
ವೇದಮೂರ್ತಿ ಅಣ್ಣಪ್ಪ ಭಟ್ ರವರು ಲಕ್ಷ್ಮೀ ಪೂಜೆಯನ್ನು ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾ ಸಂಸ್ಥೆಯ ನಿರ್ದೇಶಕ ಅಶ್ವಿನ್ ಕುಮಾರ್ ಶೆಟ್ಟಿ, ಬ್ಯಾಂಕ್ ಆಫ್ ಬರೋಡದ ನಿವೃತ್ತ ಉದ್ಯೋಗಿ ಬಾಲಚಂದ್ರ ಶೆಟ್ಟಿ, ದರ್ಬೆ ಬ್ಯಾಂಕ್ ಆಫ್ ಬರೋಡದ ಸಿಬ್ಬಂದಿಗಳಾದ ಶ್ವೇತಾ, ರಕ್ಷಾ ಶೆಟ್ಟಿ, ಹೊಟೇಲ್ ಹೆರಿಟೇಜ್ ಸಿಬ್ಬಂದಿ ವರ್ಗ ಸಹಿತ ಹಲವರು ಉಪಸ್ಥಿತರಿದ್ದರು.
ಗ್ರಾಹಕರಿಗೆ ಹೊಸತನ ನೀಡುವ ಪ್ರಯತ್ನ…
ಪ್ರಶಾಂತ್ ಮಹಲ್ ಮಾಲಕ ಸವಣೂರು ಸೀತಾರಾಮ ರೈಯವರ ಮಾರ್ಗದರ್ಶನದಲ್ಲಿ ಪುತ್ತೂರಿನ ಪ್ರಖ್ಯಾತ ರೆಸ್ಟೋರೆಂಟ್ ಹೆರಿಟೇಜ್ ಹೆಸರಿನಲ್ಲಿ ಫ್ಯೂರ್ ವೆಜ್ ಅನ್ನು ಆರಂಭಿಸಿದ್ದೇವೆ. ಈ ರೆಸ್ಟೋರೆಂಟ್ ನೆಲಮಾಳಿಗೆಯಲ್ಲಿ ಪ್ರತ್ಯೇಕ ಅಡುಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಹಳ್ಳಿ ಸೊಗಡಿನ ಶುಚಿ-ರುಚಿಯಾದ ಖಾದ್ಯಗಳು, ವಿವಿಧ ರಾಜ್ಯಗಳ ಪ್ರಸಿದ್ಧ ತಿಂಡಿ-ತಿನಸುಗಳು, ಆರ್ಟಿಫಿಶಿಯಲ್ ಜ್ಯೂಸ್ ಬದಲು ಆರ್ಗ್ಯಾನಿಕ್ ಜ್ಯೂಸ್, ಪ್ರತಿ ದಿನ ವಿಶೇಷ ಖಾದ್ಯಗಳು, ಬೆಳಿಗ್ಗೆ ಗಂಜಿ ಊಟ ಹೀಗೆ ಗ್ರಾಹಕರಿಗೆ ಹೊಸತನ ನೀಡಬೇಕೆನ್ನುವ ಪ್ರಯತ್ನ ನಮ್ಮದಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಪ್ರೋತ್ಸಾಹಿಸಿ ಹರಸಬೇಕು.
-ಮಧುಸೂದನ್ ಶೆಣೈ, ಹರೀಶ್ ಪೂಜಾರಿ,
ಪಾಲುದಾರರು, ಫ್ಯೂರ್ ವೆಜ್ ಹೆರಿಟೇಜ್ ರೆಸ್ಟೋರೆಂಟ್
ವೈಶಿಷ್ಟ್ಯತೆಗಳು…
-ಪ್ರತ್ಯೇಕ ಕಿಚನ್ ವ್ಯವಸ್ಥೆ ಹಾಗೂ ಸೆಲ್ಫ್ ಸರ್ವಿಸ್
-ವಿವಿಧ ರಾಜ್ಯಗಳ ಪ್ರಸಿದ್ಧ ತಿಂಡಿ-ತಿನಸುಗಳು(ಆಯಾ ದಿನಕ್ಕೆ)
-ಬೆಳಿಗ್ಗೆ 6 ಗಂಟೆಗೆ ಗಂಜಿ ಊಟ
-ಆರೋಗ್ಯದಾಯಕ (ಆರ್ಗ್ಯಾನಿಕ್) ಪಾನೀಯಗಳು
-ಬೆಳಿಗ್ಗೆಯಿಂದ ರಾತ್ರಿವರೆಗೆ ಕೌಂಟರ್ ತೆರೆದಿರುತ್ತದೆ
-ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ