ಪುತ್ತೂರು: ಬೆಟ್ಟಂಪಾಡಿ ರೆಂಜದಲ್ಲಿರುವ ಎಂ.ಎ.ಕಾಂಪ್ಲೆಕ್ಸ್‌ನಲ್ಲಿ ಶ್ರೀಗಣೇಶ್ ಮೆಡಿಕಲ್ಸ್ ಶುಭಾರಂಭಗೊಂಡಿತು. ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕೋರ್ಮಂಡ ರಿಬ್ಬನ್ ಕಟ್ ಮಾಡಿ ಸಂಸ್ಥೆ ಉದ್ಘಾಟಿಸಿದರು. ರೆಂಜ ಶ್ರೀದೇವಿ ಕ್ಲಿನಿಕ್‌ನ ಡಾ.ಸತೀಶ್ ಬಿ. ದೀಪ ಪ್ರಜ್ವಲಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಮೆಡಿಕಲ್‌ನ ಅವಶ್ಯಕತೆ ಇದೆ. ಕೆಲವೊಂದು ಔಷಧಗಳಿಗೆ ನಗರಗಳಿಗೆ ಹೋಗುವ ಅನಿವಾರ್ಯತೆ ಇತ್ತು. ಇದೀಗ ಬೆಟ್ಟಂಪಾಡಿ ಪರಿಸರದಲ್ಲಿ ಪಾಲುದಾರಿಕೆಯಲ್ಲಿ ಸಂಸ್ಥೆಯನ್ನು ಆರಂಭಿಸಿದ್ದಾರೆ. ಈ ಸಂಸ್ಥೆ ಉನ್ನತವಾಗಿ ಬೆಳೆಯಲಿ. ಇವರ ಪಾಲುದಾರಿಕೆಯಲ್ಲಿ ಇನ್ನಷ್ಟು ಶಾಖೆಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.
ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ ಕೃಷಿಕರೇ ಇರುವಂತಹ ಗ್ರಾಮೀಣ ಪ್ರದೇಶದಲ್ಲಿ ಜನರ ಆರೋಗ್ಯ, ಪಶು ಆರೋಗ್ಯಕ್ಕೆ ಸಂಬಂಧಿಸಿದ ಮುಂತಾದ ಔಷಧಗಳ ಮಳಿಗೆ ಪ್ರಾರಂಭಿಸಿದ್ದಾರೆ. ಸಂಸ್ಥೆ ಈ ಮಣ್ಣಲ್ಲಿ ಬೆಳಗಲಿ. ಜನರ ಅವಶ್ಕತೆಗಳಿಗೆ ತಕ್ಕಂತೆ ಸೇವೆ ನೀಡುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು. ರೆಂಜ ಮಸೀದಿಯ ಖತೀಬ್ ಆಸೀಫ್ ಸಖಾಪಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿನ ಈ ಮೆಡಿಕಲ್ ಎಲ್ಲರಿಗೂ ಉಪಯೋಗವಾಗಲಿ. ಈ ಸಂಸ್ಥೆ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು. ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ರೈ ಬೈಲಾಡಿ ಶುಭಹಾರೈಸಿದರು. ರೆಂಜ ಶ್ರೀಮಾತಾ ಡ್ರೆಸ್ಸಸ್‌ನ ಮಾಲಕ ನಾಗರಾಜ್ ಕಜೆ, ಉಮೇಶ್ ಆಳ್ವ ಕೊಟ್ಟುಂಜ ದೇವಿಪ್ರಸಾದ್ ರೈ ಕೈಕಾರ, ಅಮರನಾಥ ರೈ ಕೈಕಾರ, ಸುಧಾಕರ ರೈ ಕೈಕಾರ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಪಾಲುದಾರ ಗಣೇಶ್ ರಾಜ್ ಶೆಟ್ಟಿ ಕೈಕಾರ ಅತಿಥಿಗಳನ್ನು ಸ್ವಾಗತಿಸಿ ಕಾರ್ತಿಕ್ ರೈ ಕೈಕಾರ ವಂದಿಸಿದರು. ರಕ್ಷಿತ್ ರೈ, ಕೀರ್ತನ್ ರೈ, ಪ್ರೀತೇಶ್ ಅಡಪ, ಸಂಕೇತ್ ರೈ, ರಮ್ಯಶ್ರೀ ರೈ, ಮಹೇಶ್ ಪಿ.ಕೆ., ದಿನೇಶ್ ಪಿ.ಕೆ, ಸಿಬಂದಿ ಜಯಲಕ್ಷ್ಮಿ ಎಮ್.ಸಿ. ಹಾಗೂ ಕೈಕಾರ ಸರ್ವಶಕ್ತಿ ಯುವಕ ಮಂಡಲದ ಪದಾಧಿಕಾರಿಗಳು ಸಹಕರಿಸಿದರು.
ಗ್ರಾಮೀಣ ಭಾಗದ ಜನರಿಗೆ ಉಪಯೋಗವಾಗುವ ದೃಷ್ಟಿಯಿಂದ ಮೆಡಿಕಲ್ ಆರಂಭಿಸಿದ್ದೇವೆ. ನಮ್ಮಲ್ಲಿ ಅಲೋಪತಿ, ಪಶು ಔಷಧಗಳು, ಸರ್ಜಿಕಲ್, ಸಾಮಾಗ್ರಿಗಳು ಹಾಗೂ ಸೌಂದರ್ಯ ವರ್ಧಕಗಳು ದೊರೆಯುತ್ತದೆ. ಗ್ರಾಹಕರು ಸಹಕರಿಸಬೇಕು.
ಗಣೇಶ್ ರಾಜ್ ಶೆಟ್ಟಿ, ಕಾರ್ತಿಕ್ ರೈ
ಪಾಲುದಾರರು