ಪುತ್ತೂರು: ದ.ಕ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು, ಕುಡಿಪ್ಪಾಡಿ ಗ್ರಾಮ ಪಂಚಾಯತ್, ಬಾಲ ವಿಕಾಸನಾ ಸಮಿತಿ, ಅಂಗನವಾಡಿ ಕೇಂದ್ರ ಪಲ್ಲತ್ತಾರ್, ಸ್ತ್ರೀ ಶಕ್ತಿ ಸಂಘ, ಬಾಲಮೇಳ ಸಮಿತಿ, ಊರವರ ಸಹಕಾರದೊಂದಿಗೆ ಗ್ರಾಮ ಮಟ್ಟದ ಬಾಲ ಮೇಳ, ಸನ್ಮಾನ ಕಾರ್ಯಕ್ರಮ, ಕೊಡುಗೆ ವಿತರಣೆ ಪಲ್ಲತ್ತಾರ್ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಉದ್ಘಾಟನೆ ನೆರವೇರಿಸಿದರು. ಕೊಡಿಪಾಡಿ ಗ್ರಾ.ಪಂ ಅಧ್ಯಕ್ಷ ಸೋಮಶೇಖರ ಪೂಜಾರಿ ಓಜಾಲ ಸಭಾಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಸಿಟಿ ಪುತ್ತೂರು ಅಧ್ಯಕ್ಷ ಗ್ರೇಸಿ ಗೋನ್ಸಾಲಿಸ್, ಉದ್ಯಮಿ ಅಬ್ದುಲ್ ಖಾದರ್ ಕಲ್ಲಂದಡ್ಕ, ಕೊಡಿಪಾಡಿ ಗ್ರಾ.ಪಂ ಉಪಾಧ್ಯಕ್ಷೆ ರೇಖಾ ಬಟ್ರುಪಾಡಿ, ಕೊಡಿಪಾಡಿ ಅಂಗನವಾಡಿ ಕೇಂದ್ರದ ಮೇಲ್ವಿಚಾರಕರಿ ಸುಜಾತ, ಕೊಡಿಪಾಡಿ ಗ್ರಾ.ಪಂ ಸದಸ್ಯರಾದ ಗಿರೀಶ್ ನಂದನ್, ಚಂದ್ರಾವತಿ, ಸಿ.ಎಚ್.ಓ ರಾಧಾ ಪಾಟಿಲ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ಶೀಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಪ್ರಭಾಕರ ರಾವ್ ಕೊಡಿಪಾಡಿ, ದೈವಾರಾಧಕ ಮೋನಪ್ಪ ಮಡಿವಾಳ, ದೈವ ನರ್ತಕ ಹೊನ್ನಪ್ಪ ಕಲ್ಲೇಗ ದಾನಿಗಳಾದ ಸುಬ್ರಾಯ ನಾಕ್ ಕೊಳಕೆಮಾರ್, ಸುಬ್ರಮಣ್ಯ ಗೌಡ ಹನಿಯೂರು, ರಾಜ್ಯಮಟ್ಟದ ಕ್ರೀಡಾಪಟುಗಳಾದ ಮನ್ವಿತಿ ಗೌಡ ಶೇವಿರೆ, ಶಶಾಂಕ ಶೇವಿರೆಯವರನ್ನು ಶಾಸಕ ಅಶೋಕ್ ಕುಮಾರ್ ರೈ ಸನ್ಮಾನಿಸಿದರು. ಸಂಕಿತ ಹಾಗೂ ದೀಕ್ಷ ಪ್ರಾರ್ಥಿಸಿದರು. ಸ್ತ್ರೀ ಸಂಘದ ಕಾರ್ಯಕರ್ತೆಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ದಾನಿಗಳನ್ನು ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ವಸಂತಿ ಪ್ರಾಸ್ತಾವಿಕ ಮಾತನಾಡಿದರು. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಯಿತು. ಸ್ತೀಶಕ್ತಿ ಸಂಘ ಹಾಗೂ ಊರವರ ಹಾಗೂ ಪುಟಾಣಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ಮನರಂಜಿಸಿತು. ಆಟೋಟದಲ್ಲಿ ಭಾಗವಹಿಸಿದ ಪುಟಾಣಿ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. ವಿಠಲ ನಾಯಕ್ ಕಲ್ಲಡ್ಕರವರಿಂದ ಗೀತ ಸಾಹಿತ್ಯ ಸಂಭ್ರಮ ಮನರಂಜಿಸಿತು. ಬಾಲಮೇಳ ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಪಲ್ಲತ್ತಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಜಯ ಆಚಾರ‍್ಯ ಕಲ್ಲೇಗ ವಂದಿಸಿದರು.