ಪುತ್ತೂರು:ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದೆ.
ಈ ಹಿಂದೆ ಎರಡು ವರ್ಷಗಳ ಕಾಲ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ಸರಕಾರ ಸಿಐಡಿಗೆ ವರ್ಗಾವಣೆಗೊಳಿಸಿತ್ತು.ಬಳಿಕ ಅವರ ವರ್ಗಾವಣೆಗೊಳಿಸಿ ಎಸ್ಪಿ ಕಚೇರಿಯ ಡಿಸಿಆರ್‌ಬಿ ಡಿವೈಎಸ್ಪಿಯಾಗಿ ನಿಯೋಜಿಸಲಾಗಿತ್ತು.
ಪುತ್ತೂರಿನಲ್ಲಿ ನಡೆದ ಬ್ಯಾನರ್ ಪ್ರಕರಣವೊಂದಕ್ಕೆ ಸಂಬಂಧಿಸಿ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ್ದ ಆರೋಪದಲ್ಲಿ ಪುತ್ತೂರಿನ ಆಗಿನ ಡಿವೈಎಸ್ಪಿ ಡಾ|ವೀರಯ್ಯ ಹಿರೇಮಠ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿದ್ದ ಸಂದರ್ಭ ಪ್ರಭಾರ ಡಿವೈಎಸ್ಪಿಯಾಗಿ ಡಾ.ಗಾನಾ ಪಿ.ಕುಮಾರ್ ಅವರನ್ನು ನಿಯೋಜಿಸಲಾಗಿತ್ತು.ಬಳಿಕ ಅವರನ್ನೇ ಪುತ್ತೂರು ಡಿವೈಎಸ್ಪಿಯಾಗಿ ಮುಂದುವರಿಸಲಾಗಿತ್ತು.ಇದೀಗ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.