ಬೊಳುವಾರು: ಬುಡದಲ್ಲಿ ಬಿರುಕು ಬಿಟ್ಟ ವಿದ್ಯುತ್ ಕಂಬ

0

ಪುತ್ತೂರು: ಬೊಳುವಾರು ಇನ್‌ಲ್ಯಾಂಡ್ ಮಯೂರದ ಬಳಿಯಿಂದ ಉರ್ಲಾಂಡಿ ರಸ್ತೆ ಭಾರತ್ ಬ್ಯಾಂಕ್ ಬಳಿಯಲ್ಲಿ ವಿದ್ಯುತ್ ಕಂಬದ ಬುಡದಲ್ಲಿ ಬಿರುಕು ಬಿಟ್ಟಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ.


ವಿದ್ಯುತ್ ಕಂಬದ ಬುಡದಲ್ಲಿ ಕಾಂಕ್ರೀಟ್ ಬಿರುಕುಬಿಟ್ಟಿದ್ದು ಕಬ್ಬಿಣದ ಸರಳುಗಳು ಎದ್ದು ಕಾಣುತ್ತಿವೆ ಜೊತೆಗೆ ಈ ಕಂಬವು ಸ್ವಲ್ಪ ವಾಲಿ ನಿಂತಿದೆ.ರಸ್ತೆಯ ಅಂಚಿನಲ್ಲೇ ಇರುವ ಕಂಬದಲ್ಲಿ ಎಚ್.ಟಿ ಹಾಗೂ ಎಲ್‌ಟಿ ಲೈನ್‌ಗಳನ್ನು ಹೊಂದಿದೆ.ಘನ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು ಸ್ವಲ್ಪ ತಾಗಿದರೂ ಅಪಾಯ ತಂದೊಡ್ಡಲಿದೆ.ನಿತ್ಯ ನೂರಾರು ವಾಹನಗಳು ಹಾಗೂ ಸಾರ್ವಜನಿಕರು ಇದೇ ರಸ್ತೆಯ ಮೂಲಕ ಸಂಚರಿಸುತ್ತಿದ್ದು ಸಂಭಾವ್ಯ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಇಲಾಖೆ ಸೂಕ್ತಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here