ಯುನಿಸೆಫ್‌ನಲ್ಲಿ ವಿಶ್ವ ಮಕ್ಕಳ ದಿನಾಚರಣೆ: ಕೊಂಬೆಟ್ಟು ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಆಯ್ಕೆ

0

ಪುತ್ತೂರು: ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನಿಸೆಫ್ (ಅಂತಾರಾಷ್ಟ್ರೀಯ ಮಕ್ಕಳ ತುರ್ತುನಿಧಿ) ನ.20ರಂದು ವಿಶ್ವ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರಸಕ್ತ ವರ್ಷ ಯುನಿಸೆಫ್ ಭಾರತದಾದ್ಯಂತ ಇರುವ ಕ್ರಿಯಾತ್ಮಕ ಹಾಗೂ ನವೀನ ಪ್ರತಿಭೆಗಳನ್ನು ಜೊತೆಗೂಡಿಸುವ ಮೂಲಕ ಮಕ್ಕಳ ದಿನವನ್ನು ಆಚರಿಸಲು ಯೋಜಿಸಿದ್ದು ಇದರಲ್ಲಿ ಕರ್ನಾಟಕದ ಎರಡು ಸಂಸ್ಥೆಗಳ ವಿದ್ಯಾರ್ಥಿಗಳಲ್ಲಿ ಪುತ್ತೂರು ಕೊಂಬೆಟ್ಟು ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಶ್ರೀಯಾ ಆರ್.ವಿ. ಹಾಗೂ ಶಿಲ್ಪಾರವರು ನ.20ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ಕೊಂಬೆಟ್ಟು ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಅಟಲ್ ಟಿಂಕರಿಂಗ್ ಲ್ಯಾಬ್‌ನಿಂದ ಪ್ರಾತ್ಯಕ್ಷಿಕೆ ನೀಡಲು ಆಯ್ಕೆಯಾಗಿದ್ದು, ಶಿಕ್ಷಕಿ ಸಿಂಧೂ ವಿ.ಕೆ. ಮಾರ್ಗದರ್ಶನದಲ್ಲಿ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಲಿದ್ದಾರೆ. ಶಾಸಕ ಅಶೋಕ್‌ಕುಮಾರ್ ರೈ ಕೋಡಿಂಬಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಶಾಲಾ ಉಪಪ್ರಾಂಶುಪಾಲ ವಸಂತ ಮೂಲ್ಯ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಜೋಕಿಂ ಡಿ’ಸೋಜಾ, ಸ್ಥಳೀಯ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ಶಿಕ್ಷಕ ಸೇರ ಕೋಟಿಯಪ್ಪ ಪೂಜಾರಿ ಮತ್ತಿತರರು ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ. ಶ್ರೀಯಾ ಆರ್.ವಿ.ರವರು ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ರಾಧಾಕೃಷ್ಣ ಗೌಡ, ಶಿಲ್ಪಾರವರು ಕಬಕ ನಿವಾಸಿ ಪರಮೇಶ್ವರ ಗೌಡರವರ ಪುತ್ರಿಯರಾಗಿದ್ದಾರೆ.
ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೊಸ ಹೊಸ ಯೋಚನೆಗಳ ಯೋಜನಾ ಕಾರ್ಯಗಳನ್ನು ಪ್ರದರ್ಶಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಕ್ರಿಯಾತ್ಮಕವಾದ ಯೋಜನಾಕಾರ್ಯಗಳನ್ನು ಪ್ರದರ್ಶಿಸಲು ಅವಕಾಶ ನೀಡಿದ್ದು, ಅದರೊಂದಿಗೆ ಸಂವೇದನಾತ್ಮಕವಾದ ಕಾರ್ಯಗಾರ ನಡೆಯಲಿದೆ. ಮಕ್ಕಳ ಹಕ್ಕುಗಳು ಹಾಗೂ ಲಿಂಗ ಸಮಾನತೆಗಳ ಬಗ್ಗೆ ಮಕ್ಕಳು ಹಾಗೂ ಹಿರಿಯರು ಭಾಗವಹಿಸಲಿದ್ದು ತಜ್ಞರೊಂದಿಗೆ ನೇರ ಚರ್ಚೆಗೂ ಅವಕಾಶ ನೀಡಲಾಗಿದೆ.

LEAVE A REPLY

Please enter your comment!
Please enter your name here