ಪೆರಾಬೆ: ಪೆರಾಬೆ ಗ್ರಾಮ ಪಂಚಾಯತ್‌ನ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹ ನ.19ರಂದು ನಡೆಯಿತು.ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.ಅವರು ಅಧ್ಯಕ್ಷತೆ ವಹಿಸಿದ್ದರು. ಡಿ.ಜಿ.ವಿಕಸನದ ತಾಲೂಕು ಸಂಯೋಜಕಿ ರಾಧಿಕಾ ಅವರು ಮಾಹಿತಿ ನೀಡಿ, ಗ್ರಂಥಾಲಯವನ್ನು ಎಲ್ಲಾ ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು. ಗ್ರಾ.ಪಂ.ಸದಸ್ಯರಾದ ಚಂದ್ರಶೇಖರ ರೈ, ಲೀಲಾವತಿ, ಮಮತಾ ರೈ, ಮೋನ್ಸಿ ಸಾಜನ್ ಶುಭಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಗೆ ಚಿತ್ರಕಲೆ, ಕಥೆ ಹೇಳುವುದು, ಜವಾಹಾರ್‌ಲಾಲ್ ನೆಹರು ಬಗ್ಗೆ ಭಾಷಣ, ದಿನಪತ್ರಿಕೆ ಓದುವುದು, ಗ್ರಾಮೀಣ ಗ್ರಂಥಾಲಯದ ಮಹತ್ವದ ಕುರಿತು ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ., ರಾಧಿಕಾ, ಶ್ರುತಿ ಅವರು ಸ್ಪರ್ಧಾ ಕಾರ್ಯಕ್ರಮ ನಡೆಸಿಕೊಟ್ಟರು. ವಿಜೇತ ಮಕ್ಕಳಿಗೆ ಗ್ರಾ.ಪಂ.ನ ಮಕ್ಕಳ ಗ್ರಾಮಸಭೆಯಲ್ಲಿ ಬಹುಮಾನ ವಿತರಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಪೋಷಕರಾದ ವಿಶ್ವನಾಥ ಇಡಾಲ, ಸೇಸಪ್ಪ, ದಿನಕರ ಭಟ್ ಮತ್ತಿತರರು ಉಪಸ್ಥಿತರಿದ್ದರು. ಪೆರಾಬೆ ಗ್ರಾ.ಪಂ.ಗ್ರಂಥಾಲಯ ಮೇಲ್ವಿಚಾರಕಿ ಜಯಕುಮಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪೆರಾಬೆ ಗ್ರಾ.ಪಂ.ವತಿಯಿಂದ ಮಕ್ಕಳಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.