ನ.21, 22ರಂದು ಕ.ಸಾ.ಪ ಪುತ್ತೂರು, ರೋಟರಿ ಯುವ ನೇತೃತ್ವದಲ್ಲಿ ಶಿಕ್ಷಣ ತಜ್ಞೆ ವಚನ ಜಯರಾಮ್ ಅವರಿಂದ ಶೈಕ್ಷಣಿಕ ಕಾರ್ಯಾಗಾರ

0

ಪುತ್ತೂರು: ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ತಿಳಿಸುವ ಮತ್ತು ಶಿಕ್ಷಣದ ಪರಿಪೂರ್ಣ ಸದುಪಯೋಗ ಪಡಿಸಿಕೊಳ್ಳುವ ಹಾಗೂ ವಿದ್ಯಾರ್ಥಿ ಜೀವನದ ಸಮಯ ಪಾಲನ ಜ್ಞಾನ ನೀಡುವ ನಿಟ್ಟಿನಲ್ಲಿ ರೋಟರಿ ಯುವ ಪುತ್ತೂರು ಹಾಗೂ ಕ.ಸಾ.ಪ ಪುತ್ತೂರು ನೇತೃತ್ವದಲ್ಲಿ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ನ.21, 22ರಂದು ಶೈಕ್ಷಣಿಕ ಕಾರ್ಯಾಗಾರ ನಡೆಯಲಿದೆ.


ಶಿಕ್ಷಣ ತಜ್ಞೆ ಹಾಗೂ ಪ್ರೇರಕ ಭಾಷಣಗಾರ್ತಿ ವಚನ ಜಯರಾಮ್ ಅವರು ಈ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಶಿಕ್ಷಣ ತಜ್ಞೆ ವಚನ ಜಯರಾಮ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಸಾಮಾಜಿಕ ಧುರೀಣರಾದ ಸಿ.ಪಿ ಜಯರಾಮ ಗೌಡ ಹಾಗೂ ಚಂದ್ರಕಲಾ ಅವರ ಪುತ್ರಿ. ಪ್ರದೀಪ್ ರಾಮಕೃಷ್ಣ ಗೌಡ ಅವರ ಪತ್ನಿಯಾಗಿದ್ದು ಸುಮಾರು 18 ವರ್ಷಗಳ ಕಾಲ ಮಾಹಿತಿ ತಂತ್ರಜ್ಞಾನ – ಜೈವಿಕ ತಂತ್ರಜ್ಞಾನ ವಿಭಾಗ, ಆರೋಗ್ಯ ಸೇವಾ ವಿಭಾಗ ಇತ್ಯಾದಿಗಳಲ್ಲಿ ಮಾನವ ಸಂಪನ್ಮೂಲ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಂತರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಸುಮಾರು ನಾಲ್ಕೂವರೆ ಸಾವಿರ ಸಿಬ್ಬಂದಿಗಳನ್ನು ಒಳಗೊಂಡ ತಂಡದ ಮಾನವ ಸಂಪನ್ಮೂಲ ಮುಖ್ಯ ನಿರ್ವಹಣಾಕಾರರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ಪ್ರಸ್ತುತ ಶ್ರೀ ಮಹಾಲಿಂಗೇಶ್ವರ ಐಟಿಐ ಹಾಗೂ ಬೆಳಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಕ್ಷಣ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ವರ್ತನಾ ವಿಶ್ಲೇಷಕರಾಗಿ, ಸ್ವಜೀವನ ರೂಪಿಸುವ ತರಬೇತುದಾರರಾಗಿ, ವ್ಯಕ್ತಿತ್ವ ವಿಕಸನದ ತರಬೇತುದರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.‌ ಇವರು ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಕುರಿತು, ಗುರಿ ಗುರುತಿಸುವ ಹಾಗೂ ಅದನ್ನು ಸಾಧಿಸುವ ಕುರಿತು, ಪರಿಣಾಮಕಾರಿ ಸಂವಹನ ಕಲೆ, ಸಮಯ ಪಾಲನಾ ಪರಿಜ್ಞಾನ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಾರ್ಗದರ್ಶನ, ವಿದ್ಯಾರ್ಥಿಗಳಲ್ಲಿರುವ ಕ್ಷಮತೆ ಹಾಗೂ ಕೊರತೆಯ ಅರಿವು ಮೂಡಿಸುವ, ನಾಯಕತ್ವದ ಗುಣ, ಪರಿಣಾಮಕಾರಿ ಅಧ್ಯಯನ, ವ್ಯಕ್ತಿತ್ವ ವಿಕಸನ, ಸ್ಮರಣಶಕ್ತಿ ವೃದ್ಧಿಸುವ ಕಲೆ ಕುರಿತು ಪರಿಣಾಮಕಾರಿ ಕಾರ್ಯಾಗಾರ ನಡೆಸುವಲ್ಲಿ ಪರಿಣಿತರಾಗಿದ್ದಾರೆ. ಮಾತ್ರವಲ್ಲದೆ ಅಧ್ಯಾಪಕರಿಗೆ ಪರಿಣಾಮಕಾರಿ ಬೋಧನಾ ಕಲೆ, ಆಡಳಿತ ಮಂಡಳಿಗೆ ಶಿಕ್ಷಣ ಸಂಬಂಧಿತ ಅನೇಕ ಮಾಹಿತಿ ಕಾರ್ಯಾಗಾರವನ್ನು ನೀಡುವ ಕ್ಷಮತೆ ಹೊಂದಿದ್ದಾರೆ. ಈಗಾಗಲೇ ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಗೌರವ ಇವರಿಗೆ ಸಲ್ಲುತ್ತದೆ ಎಂದು‌ ಪ್ರಕಟಣೆ ತಿಳಿಸಿದೆ.‌

LEAVE A REPLY

Please enter your comment!
Please enter your name here