ಬೆಟ್ಟಂಪಾಡಿ ಜಾತ್ರೋತ್ಸವಕ್ಕೆ ಗೊನೆಮುಹೂರ್ತ-ನ. 26 ರಿಂದ 29 ಮೊದಲ ಜಾತ್ರೋತ್ಸವ

0

ಬೆಟ್ಟಂಪಾಡಿ: ಸೀಮೆಯ ಮೊದಲ ಜಾತ್ರೋತ್ಸವ ಎಂದೇ ಪ್ರಸಿದ್ದಿ ಹೊಂದಿರುವ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಉತ್ಸವ ನ. 26 ರಿಂದ 29 ರವರೆಗೆ ನಡೆಯಲಿದ್ದು, ಅದರಂಗವಾಗಿ ಗೊನೆಮುಹೂರ್ತ ನ. 20 ರಂದು ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ.ಮೂ. ವೆಂಕಟ್ರಮಣ ಭಟ್ ಕಾನುಮೂಲೆಯವರು ಬೆಳಿಗ್ಗೆ ಶ್ರೀದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಿದರು. ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ಶಿವಕುಮಾರ್ ಬಲ್ಲಾಳ್, ಅರ್ಚಕ ನಾರಾಯಣ ಭಟ್, ಸಹಾಯಕರಾದ ಪ್ರಸನ್ನ ಭಟ್, ಕ್ಲರ್ಕ್ ವಿನಯ ಕುಮಾರ್ ಹಾಜರಿದ್ದರು.

LEAVE A REPLY

Please enter your comment!
Please enter your name here