ಆದರ್ಶ ಸಹಕಾರ ಸಂಘ ಸಮಾಜಕ್ಕೆ ಆದರ್ಶ- ರಾಜೇಶ್ ನಾಯ್ಕ್
ಜನರಿಗೆ ಸುಲಭದಲ್ಲಿ ಸಾಲ ಸಿಗಬೇಕು- ರಮಾನಾಥ ರೈ
ಪುತ್ತೂರು: ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸವಣೂರು ಕೆ. ಸೀತಾರಾಮ ರೈಯವರ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ 14ನೇ ಬಿ.ಸಿ. ರೋಡ್ ಶಾಖೆ ನ. 20ರಂದು ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ಗುಡಿಯ ಹತ್ತಿರ ಪಾರ್ಕ ಸ್ಕೈರ್ನ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಂಡಿತು.
ಆದರ್ಶ ಸಹಕಾರ ಸಂಘ ಸಮಾಜಕ್ಕೆ ಆದರ್ಶ- ರಾಜೇಶ್ ನಾಯ್ಕ್
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಶಾಖೆಯನ್ನು ದೀಪಬೆಳಗಿಸಿ, ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕುಗಳು ದಾಖಲೆಗಳನ್ನೇ ಆದರಿಸಿ ಸಾಲ ಸೌಲಭ್ಯಗಳನ್ನು ನೀಡಿದರೆ, ಸಹಕಾರಿ ಸಂಸ್ಥೆಗಳು ಮಾನವೀಯತೆಯನ್ನೂ ಪರಿಗಣಿಸಿ ಸಾಲ ನೀಡುತ್ತದೆ. ಅದರ್ಶ ಸಹಕಾರ ಸಂಘ ಸಮಾಜಕ್ಕೆ ಆದರ್ಶವಾಗಿ ಬೆಳೆದು ನಿಂತಿದೆ. ತಮ್ಮ ಸಂಘದ ಲಾಭಾಂಶವನ್ನು ಸರಕಾರಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿರುವುದು ಸೀತಾರಾಮ ರೈಯವರ ಹೆಗ್ಗಳಿಕೆ. ಸೀತಾರಾಮ ರೈಯವರ ಬೆಳವಣಿಗೆಗೆ ಇನ್ನಷ್ಟು ಶಕ್ತಿಯನ್ನು ದೇವರು ಅನುಗ್ರಹಿಸಲಿ ಎಂದು ಶುಭಹಾರೈಸಿ, ಆದರ್ಶ ಸಹಕಾರ ಸಂಸ್ಥೆಯು ಶೇ 15 ಡಿವಿಡೆಂಡ್ನ್ನು ನೀಡುತ್ತಿರುವುದು ತುಂಬಾ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಮತ್ತಷ್ಟು ಪ್ರಗತಿಯನ್ನು ಕಾಣಲಿ ಎಂದು ಹಾರೈಸಿದರು.
ಜನರಿಗೆ ಸುಲಭದಲ್ಲಿ ಸಾಲ ಸಿಗಬೇಕು- ರಮಾನಾಥ ರೈ
ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಸಚಿವ ಬಿ. ರಮಾನಾಥ ರೈರವರು ಮಾತನಾಡಿ ಜನರಿಗೆ ಸುಲಭದಲ್ಲಿ ಸಾಲ ಸಿಗಬೇಕು, ಆದು ಸಹಕಾರಿ ಸಂಘಗಳಿಂದ ಮಾತ್ರ ಸಾಧ್ಯ ಎಂದು ಹೇಳಿ, ಸಹಕಾರಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ಪಡೆದಿರುವ ಸೀತಾರಾಮ ರೈಯವರು ಶಿಕ್ಷಣ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದ್ದಾರೆ. ಬ್ಯಾಂಕ್ಗಳನ್ನು ಸರಕಾರ ರಾಷ್ಟ್ರೀಕೃತ ಮಾಡಿರುವ ಉದ್ದೇಶ ಬಡವರಿಗೆ ಸಾಲ ನೀಡಬೇಕು ಎಂಬ ನೆಲೆಯಲ್ಲಿ ಆದರೆ ಬ್ಯಾಂಕ್ಗಳು ಅರ್ಥಿಕ ಸ್ಥಿತಿವಂತರಿಗೆ ಮಾತ್ರ ಪ್ರಯೋಜನವಾಗಿದೆ. ಇದೀಗ ಸಹಕಾರ ಸಂಘಗಳು ಪ್ರಬಲವಾಗಿ ಬೆಳೆದು ನಿಂತು ಶ್ರೀಸಾಮನ್ಯನ ಬದುಕಿಗೆ ಆಸರೆಯಾಗಿದೆ ಎಂದು ಹೇಳಿ, ಬಂಟ್ವಾಳದಲ್ಲಿ ಆದರ್ಶ ಸಹಕಾರ ಸಂಸ್ಥೆ ಪ್ರಗತಿಯನ್ನು ಸಾಧಿಸಲಿ ಎಂದು ಹಾರೈಸಿದರು
ಸೀತಾರಾಮ ರೈಯವರಿಂದ ಸಂಸ್ಥೆ ಅಭಿವೃದ್ಧಿ- ಪ್ರಕಾಶ್ ಕಾರಂತ್
ಭದ್ರತಾ ಕೊಠಡಿಯನ್ನು ಉದ್ಘಾಟನೆಗೈದ ರೋಟರಿ ಜಿಲ್ಲೆ 3181ರ ಮಾಜಿ ಜಿಲ್ಲಾ ಗವರ್ನರ್ ರೊ. ಯನ್. ಪ್ರಕಾಶ್ ಕಾರಂತ್ರವರು ಮಾತನಾಡಿ ಸಹಕಾರ ಸಂಘಗಳು ಗ್ರಾಮೀಣ ಜನರ ಸ್ವಾಭಿಮಾನದ ಬದುಕನ್ನು ರೂಪಿಸಲು ನೆರವು ಆಗಿದೆ. ಸಹಕಾರಿ ಸಂಸ್ಥೆ ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆಯನ್ನು ನೀಡಿದೆ. ಸೀತಾರಾಮ ರೈಯವರ ಆದರ್ಶ ಸಹಕಾರಿ ಸಂಘವೂ ಈ ನಿಟ್ಟಿನಲ್ಲಿ ಮಹತ್ತರ ಪಾತ್ರವಹಿಸಿದೆ. ಸೀತಾರಾಮ ರೈಯವರು ಅಗ್ರಸ್ಥಾನದಲ್ಲಿದ್ದಾರೆ. ತಾವು ಕೆಲಸ ಮಾಡಿದ ಪ್ರತಿಯೊಂದು ಸಂಸ್ಥೆಯನ್ನೂ ವಿಶೇಷವಾಗಿ ಅಭಿವೃದ್ಧಿ ಪಡಿಸಿದ ಕೀರ್ತಿ ರೈಯವರಿಗೆ ಸಲ್ಲುತ್ತದೆ ಎಂದರು ಹೇಳಿದರು
ಐಕ್ಯತೆಯ ಸಂಕೇತ- ವಲೇರಿಯನ್ ಎಸ್.ಡಿ’ಸೋಜ
ಕಂಪ್ಯೂಟರ್ ನ್ನು ಉದ್ಘಾಟಕರಾದ ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ನ ಧರ್ಮಗುರು ರೆ.ಫಾ. ವಲೇರಿಯನ್ ಎಸ್.ಡಿ’ಸೋಜರವರು ಮಾತನಾಡಿ ಸಹಕಾರ ಪ್ರವೃತಿಯು ನಮ್ಮಲ್ಲಿ ಐಕ್ಯತೆಯ ಸಂಕೇತವಾಗಿದ್ದು, ಆದರ್ಶ ಸಂಸ್ಥೆಯು ಇನ್ನಷ್ಟು ಸಾಧನೆಯನ್ನು ಮಾಡಲಿ ಎಂದು ಶುಭಹಾರೈಸಿದರು.
ಆದರ್ಶವಾಗಿ ಬೆಳೆಯಲಿ- ಅಬೂಬಕ್ಕರ್
ಬಿ.ಸಿ.ರೋಡ್ ಶಾಖೆಯ ಪ್ರಥಮ ಠೇವಣಿ ಪತ್ರ ಬಿಡುಗಡೆಗೈದ ಪೊಳಲಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಅಬೂಬಕ್ಕರ್ ಅಮ್ಮುಂಜೆ ಸವಣೂರು ಸೀತಾರಾಮ ರೈಯವರು ಆದರ್ಶ ಸಹಕಾರ ಸಂಸ್ಥೆಯ ಮೂಲಕ ಪ್ರತೀ ವರ್ಷ ಲಕ್ಷಾಂತರ ರೂಪಾಯಿ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದಾರೆ. ಸಂಸ್ಥೆ ಇನ್ನಷ್ಟು ಬೆಳೆದು ಸಮಾಜಕ್ಕೆ ಆದರ್ಶವಾಗಿ ಬೆಳೆಯಲಿ ಎಂದು ಶುಭಹಾರೈಸಿದರು.
ಆದರ್ಶ ಉತ್ತಮ ವಿವಿಧೋದ್ದೇಶ ಸಂಘ- ಜೈರಾಜ್ ಬಿ. ರೈ
ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೈರಾಜ್ ಬಿ.ರೈಯವರು ಮಾತನಾಡಿ ಆದರ್ಶ ಸಹಕಾರ ಸಂಸ್ಥೆಯು ಅವಿಭಜಿತ ಜಿಲ್ಲೆಯ ಉತ್ತಮ ವಿವಿಧೋದೇಶ ಸಹಕಾರ ಸಂಸ್ಥೆಯಾಗಿ ಬೆಳೆದು ಬಂದಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದು ಹೇಳಿ, ಸವಣೂರು ಸೀತಾರಾಮ ರೈಯವರ ನಾಯಕತ್ವದಲ್ಲಿ ಆದರ್ಶ ಸಂಸ್ಥೆಯು ಮತ್ತಷ್ಟು ಪ್ರಗತಿಯನ್ನು ಸಾಧಿಸಲಿ ಎಂದರು.
ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು ಮತ್ತು ಸಂಘದ ಮಹಾಪ್ರಬಂಧಕ ವಸಂತ ಜಾಲಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೊಣಾಲು ವಂದಿಸಿದರು.
ಸಂಘದ ನಿರ್ದೇಶಕರುಗಳಾದ ಮಹಾಬಲ ರೈ ಬೊಳಂತೂರು, ಜಯಪ್ರಕಾಶ್ ರೈ ಚೊಕ್ಕಾಡಿ, ಅಶ್ವಿನ್ ಎಲ್ ಶೆಟ್ಟಿ, ಎಂ.ಎಸ್.ಬಾಪು ಸಾಹೇಬ್ ಸುಳ್ಯ, ರವೀಂದ್ರನಾಥ ಶೆಟ್ಟಿ ಕೇನ್ಯ, ರಾಮಯ್ಯ ರೈ ತಿಂಗಳಾಡಿ, ಚಿಕ್ಕಪ್ಪ ನಾಯಕ್ ಅರಿಯಡ್ಕ, ಸೀತಾರಾಮ ಶೆಟ್ಟಿ ಮಂಗಳೂರು, ವಿ.ವಿ.ನಾರಾಯಣ ಭಟ್,ಮಹಾದೇವ್ ಮಂಗಳೂರು,ಪೂರ್ಣಿಮಾ ಎಸ್ ಆಳ್ವ, ಯುಮುನಾ ಎಸ್ ರೈ ಗುತ್ತುಪಾಲು ಉಪಸ್ಥಿತರಿದ್ದರು
ಪಂಜ ಶಾಖೆಯ ವ್ಯವಸ್ಥಾಪಕ ಪರಮೇಶ್ವರ ಗೌಡ ಬಿಳಿಮಲೆ ಕಾರ್ಯಕ್ರಮ ನಿರೂಪಿಸಿದರು.. ಸಂಘದ ಕೇಂದ್ರ ಕಚೇರಿ ವ್ಯವಸ್ಥಾಪಕ ಸುನಾದ್ರಾಜ್ ಶೆಟ್ಟಿ, ಬಿ.ಸಿ.ರೋಡ್ ಶಾಖಾ ವ್ಯವಸ್ಥಾಪಕ ವಿನೋದ್ಕುಮಾರ್ ಶೆಟ್ಟಿ ಮತ್ತು ಸಿಬ್ಬಂಧಿಗಳು ಸಹಕರಿಸಿದರು
ನಮ್ಮ ಸಂಘದ ಲಾಭಾಂಶದಲ್ಲಿ ಪ್ರತೀ ವರ್ಷ ನಮ್ಮ ಸಂಘದ ಎಲ್ಲಾ ಶಾಖೆಗಳ ವ್ಯಾಪ್ತಿಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಸುಮಾರು 200 ವಿದ್ಯಾರ್ಥಿಗಳಿಗೆ 4 ಲಕ್ಷದಂತೆ ಇದುವರೆಗೆ ಸುಮಾರು 25 ಲಕ್ಷ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದೇವೆ. ಸಹಕಾರಿ ಕ್ಷೇತ್ರದಲ್ಲಿ ಸುಮಾರು 55 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ನಮ್ಮ ಸಂಘದಿಂದ 50 ಲಕ್ಷದ ವರೆಗೆ ಕೇವಲ ಎರಡೇ ದಿವಸಗಳಲ್ಲಿ ಸಾಲ ನೀಡುತ್ತೇವೆ. ಜ್ಯುವೆಲ್, ವಾಹನ, ಆಸ್ತಿ, ಕೃಷಿ ಹೀಗೆ ಎಲ್ಲಾ ರೀತಿಯ ಸಾಲಗಳನ್ನು ನೀಡುತ್ತೇವೆ –