ಕೆಪಿಎಸ್ ಕೆಯ್ಯೂರಿನಲ್ಲಿ ತಾ|ಮಟ್ಟದ ಪ್ರತಿಭಾ ಕಾರಂಜಿ `ಕಲಾ ಸಂಗಮದ ಸಭಾ ಕಾರ್ಯಕ್ರಮ    

0

ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಮುಖ್ಯ ಶಾಲೆಗೆ ಮರ್ಜಿ ಮಾಡುವ ಪ್ರಕ್ರಿಯೆ ನಡೆಯಲಿದೆ: ಶಾಸಕ ಅಶೋಕ್ ಕುಮಾರ್ ರೈ

ಕೆಯ್ಯೂರು: ದ.ಕ.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು,ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ `ಕಲಾ ಸಂಗಮ2023–24ನ.20ರಂದು ಕೆಪಿಎಸ್ ಕೆಯ್ಯೂರಿನಲ್ಲಿ ನಡೆಯಿತು.

ಕೆಯ್ಯೂರು ಗ್ರಾ.ಪಂ.ಅಧ್ಯಕ್ಷ ಕೆ.ಶರತ್ ಕುಮಾರ್ ಕಾರ್ಯಕ್ರಮದ, ಪ್ರತಿಭಾ ಧ್ವಜಾರೋಹಣ ಮಾಡಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಪ್ರತಿಭೆಗಳನ್ನು ಗುರುತಿಸುವಿಕೆ ಮತ್ತು ಸಮಾಜದಲ್ಲಿ  ವಿಧ್ಯಾರ್ಥಿಗಳು ಪ್ರತಿಭಾವಂತರಾಗಿ ಮುಂದೆ ಬರಲು ಸಾಧ್ಯ, ಮಕ್ಕಳ ಪ್ರತಿಭೆಗಳಲ್ಲಿ ಸೋಲು-ಗೆಲುವು ಶಾಶ್ವತ,  ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ಸಹಕರಿಸಿ ಪ್ರತಿಭಾವಂತರಾಗಿ ಮುಂದೆ ಬನ್ನಿ ಎಂದು ಶುಭ ಹಾರೈಸಿದರು. ಉಧ್ಘಾಟನಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಶಾಸಕ ಅಶೋಕ್ ಕುಮಾರ್ ರೈ  ಸರಕಾರಿ ಶಾಲೆಗಳನ್ನು ಉಳಿಸಬೇಕಾದರೆ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಬೇಕು. ಆದರೆ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಮತ್ತು ಶಿಕ್ಷಕರ ಕೊರತೆಯ ಕಾರಣಕ್ಕೆ ಹಲವು ಮಂದಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದು ಇದರಿಂದ ಗ್ರಾಮೀಣ ಭಾಗದ ಸರಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತದಲ್ಲಿದ್ದು ಮಕ್ಕಳ ಕೊರತೆ ಇರುವ ಶಾಲೆಗಳನ್ನು ಆಯಾ ಗ್ರಾಮದ ಮುಖ್ಯ ಶಾಲೆಗೆ ಮರ್ಜಿ ಮಾಡಲಾಗುವುದು ಎಂದು ಶಾಸಕರಾದ ಅಶೋಕ್ ರೈ ಹೇಳಿದರು. ಸರಕಾರಿ ಶಾಲೆಗಳಲ್ಲಿದ್ದ ಶಿಕ್ಷಕರ ಕೊರತೆಯನ್ನು ನೀಗಿಸಲಾಗಿದೆ. ಪುತ್ತೂರು ತಾಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ. ವಿಷಯವಾರು ಶಿಕ್ಷಕರ ನೇಮಕವಾಗಿರುವ ಕಾರಣ ಮುಂದೆ ಯಾವುದೇ ಶಾಲೆಗಳಲ್ಲಿಯೂ ಶಿಕ್ಷಕರ ಕೊರತೆ ಸಬೂಬು ಇಲ್ಲದಂತಗಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಖಂಡಿತವಾಗಿಯೂ ದೊರೆಯಲಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಿಗೆ ತೆರಳಲು ಬಸ್ಸಿನ ಕೊರತೆ ಇತ್ತು ಅದಕ್ಕಾಗಿ ಈಗಾಗಲೇ 8 ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರಕಾರ ವ್ಯವಸ್ಥೆ ಮಾಡಲಿದ್ದು ಪ್ರತೀಯೊಂದು ಮಗು ಶಿಕ್ಷಣ ಪಡೆಯುವಂತಾಗಬೇಕು ಎಂದು ಶಾಸಕರು ಹೇಳಿದರು. ಪ್ರತಿಭಾ ಕಾರಂಜಿಯ ಮೂಲಕ ಮಕ್ಕಳ ಪ್ರತಿಭೆಯನ್ನು ಹುಡುಕುವ ಕಾರ್ಯವನ್ನು ಶಿಕ್ಷಕರು ಮಾಡಲಿದ್ದಾರೆ ಎಂದು ಹೇಳಿದ ಸಾಸಕರು ಪ್ರತಿಭಾವಂತ ಮಕ್ಕಳಿಗೆ ಅವರ ಪ್ರತಿಭೆಯ ಅನಾವರಣಕ್ಕೆ ವೇದಿಕೆಯನ್ನು ಕಲ್ಪಿಸುವ ವ್ಯವಸ್ಥೆ ಸರಕಾರಿ ಶಾಲೆಗಳಲ್ಲಿ ನಡೆಯುತ್ತಿದೆ ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ  ಸದಾಶಿವ ರೈ ದಂಬೆಕಾನ, ಪುತ್ತೂರು ಕ್ಷೇತ್ರ ಶಿಕ್ಷಾಣಾಧಿಕಾರಿ ಲೋಕೇಶ್ ಎಸ್ ಆರ್, ಕೆಪಿಎಸ್ ಕೆಯ್ಯೂರು ಕಾರ್ಯಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು, ಕಲಾಸಂಗಮ ಸ್ವಾಗತ ಸಮಿತಿ ಅಧ್ಯಕ್ಷ ಎಸ್ ಬಿ ಜಯರಾಮ ರೈ ಬಳಜ್ಜ, ಕೆಪಿಎಸ್ ಕೆಯ್ಯೂರು ಎಸ್ ಡಿ ಎಂ ಸಿ ಉಪಾದ್ಯಕ್ಷ ಚರಣ್ ಕುಮಾರ್ ಸಣಂಗಳ, ಬಿ.ಅರ್.ಸಿ ಸಮನ್ವಯಾಧಿಕಾರಿ ಪುತ್ತೂರು ನವೀನ್ ಸ್ಟೀಪನ್ ವೇಗಸ್, ಕೆಪಿಎಸ್ ಪ್ರಾಥಮಿಕ ವಿಬಾಗ ಕೆಯ್ಯೂರು ಪದವೀಧರೇತರ ಮುಖ್ಯಗುರು ಬಾಬು.ಎಂ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ,    ಪ್ರಗತಿಪರ ಕೃಷಿಕ ಉಮಾಕಾಂತ್ ಬೈಲಾಡಿ , ಸಂತೋಷ್ ಗ್ರುಪ್ ಮಾಡಾವು ಉದ್ಯಮಿ ಹುಸೈನಾರ್ ಸಂತೋಷ್ ನಗರ, ಜ್ಯೋತಿ ಕ್ಲಿನಿಕ್ ಮಾಡಾವು  ಡಾ.ಎ.ಪಿ. ರಾಮಚಂದ್ರ ಭಟ್, ಪುತ್ತೂರು ಪ್ರೌಢಶಾಲಾ ಮುಖ್ಯೋಫಾದ್ಯಯರ ಸಂಘ ಅಧ್ಯಕ್ಷ ಜಯರಾಮ ಶೆಟ್ಟಿ, ಕಡಬ ಸರಕಾರಿ ನೌಕರ ಸಂಘ ಅಧ್ಯಕ್ಷ ವಿಮಲ್ ನೆಲ್ಯಾಡಿ, ಪುತ್ತೂರು ಪ್ರೌಢಶಾಲಾ ಸಹ ಶಿಕ್ಷಕ ಸಂಘ ಅಧ್ಯಕ್ಷರಾದ ಅಬ್ರಾಹಂ ಎಸ್.ಎ, ಕಡಬ ಅದ್ಯಕ್ಷ ಶಾಂತರಾಮ್ ಕೊಣಾಲು, ಪ್ರೌಢಶಾಲಾ ಶಿಕ್ಷಕ ಸಂಘ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ಯಾಮಲ, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಅದ್ಯಕ್ಷರಾದ ಪುತ್ತೂರು ನವೀನ್ ಕುಮಾರ್ ರೈ, ಕಡಬ ರಾಮಕೃಷ್ಣ ಮಲ್ಲಾರ, ಪುತ್ತೂರು ದೈ.ಶಿ.ಸಂಘ ಸೀತಾರಾಮ ಗೌಡ ಹೀರೆಬಂಡಾಡಿ, ಮಾತೃಸಂಘ ಸೀತಾರಾಮ ಗೌಡ ಪೇರಲ್ತಡ್ಕ, ದೈ.ಶಿ.ಸಂಘ ಸುಧಾಕರ ರೈ, ಕಡಬ ದೈ.ಶಿ.ಸಂಘ ಗ್ರೇಡ್ ಬಾಲಕೃಷ್ಣ ಗೌಡ ,ಮೂಡ ದೈ.ಶಿ.ಸಂಘ ಬೇಬಿ ನೂಜಿ ಬಾಳ್ತಿಲ, ಹಿರಿಯ ಪ್ರಾಥಮಿಕ ಮುಖ್ಯ ಶಿಕ್ಷಕ ಸಂಘ ಜಿಲ್ಲಾಧ್ಯಕ್ಷ ನಿಂಗರಾಜು, ಪುತ್ತೂರು ತಾಲೂಕು ಪ್ರಾಥಮಿಕ ಮುಖ್ಯ ಶಿಕ್ಷಕ ಸಂಘ ಅದ್ಯಕ್ಷೆ ಶುಭಲತಾ, ದ.ಕ.ದೈ.ಶಿಕ್ಷಕ ಸಂಘ ಜಿಲ್ಲಾ ಕಾರ್ಯಧ್ಯಕ್ಷ ಮಾಮಚ್ಚನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . (ಪ್ರಾಸ್ತವಿಕ ವರದಿಯಲ್ಲಿ ಈ ವರ್ಷ ಪ್ರತಿಭಾ ಕಾರಂಜಿ ಕಲಾಸಂಗಮ 2023-24 ನಡೆಯಲು ಕಳೆದ ವರ್ಷ ಕೆಪಿಎಸ್ ಎಸ್ ಡಿ ಎಂ ಸಿ ಉಪಾದ್ಯಕ್ಷ ಎಸ್ ಬಿ ಜಯರಾಮ ರೈ ಬಳಜ್ಜರವರ ಅವಧಿಯಲ್ಲಿ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಕಲಾಸಂಗಮ ನಡೆಸಲು ಮಂಜೂರಾಗಿರುತ್ತದೆ.2023-24 ಸಾಲಿನಲ್ಲಿ ಕೆಪಿಎಸ್ ಕೆಯ್ಯೂರು ಕಾರ್ಯಧ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು ಇವರ ಅವಧಿಯಲ್ಲಿ ನಡೆಯುತ್ತಿದೆ  ಎಂದು ಪ್ರಾಸ್ತಾವಿಕ ಮಾತಲ್ಲಿ ಕೆಪಿಎಸ್ ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್ ಹೇಳಿದರು.) ವೇದಿಕೆಯಲ್ಲಿದ್ದ ಗಣ್ಯವ್ಯಕ್ತಿಗಳಿಗೆ ಶಾಲು ಹಾಲು ಪುಸ್ತಕ ವಿತರಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ  ಕೆಪಿಎಸ್ ಕೆಯ್ಯೂರಿನಲ್ಲಿ 13ವರ್ಷಗಳ ಕಾಲ ಚಿತ್ರಕಲಾ ವಿಭಾಗದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಎಲ್.ಎಚ್  ಗೌಂಡಿ ಪಲಪುಷ್ಪ ಶಾಲು ಹಾಕಿ ಸನ್ಮಾನಿಸಲಾಯಿತು. ಕಪೀಲೇಶ್ವರ ಸಿಂಗಾರಿ ಮೇಳ ಚಾರ್ವಕ ಇವರಿಂದ ಚೆಂಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿವಿದ ಸಮಿತಿಯ ಸಂಚಾಲಕರು,ಸದಸ್ಯರುಗಳು, ಕೆಯ್ಯೂರು ಗ್ರಾ.ಪಂ.ಸದಸ್ಯರು, ಸಂಘಸಂಸ್ಥೆಗಳು, ವಿವಿಧ ಶಾಲೆಗಳ ಸಿ.ಆರ್ ಪಿ , ತೀರ್ಪುಗಾರರು, ಶಿಕ್ಷಕವೃಂದ, ಉಪನ್ಯಾಸಕರು, ಮಕ್ಕಳ ಪೋಷಕರು, ವಿಧ್ಯಾರ್ಥಿಗಳು ಸಹಕರಿಸಿದರು. ಕೆಪಿಎಸ್ ಕೆಯ್ಯೂರು ವಿದ್ಯಾರ್ಥಿಯಿನಿಯರು ಪ್ರಾರ್ಥಿಸಿ,  ಕೆಪಿಎಸ್ ಕೆಯ್ಯೂರು ಕಾರ್ಯದ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು ಸ್ವಾಗತಿಸಿ, ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ ವಂದಿಸಿ, ಜೆಸ್ಸಿ ಪಿ.ವಿ, ನಳಿನಿ ಡಿ, ಸುಪ್ರಭಾ ಕಾರ್ಯಕ್ರಮ ನಿರುಪಣೆಗೈದರು.

LEAVE A REPLY

Please enter your comment!
Please enter your name here