ಪುತ್ತೂರು: ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ರಿಜಿಸ್ಟರ್ ಮಂಗಳೂರು ಇವರ ಮಹತ್ವಾಕಾಂಕ್ಷಿ ಯೋಜನೆಯಾದ ಎಂ.ಫ್ರೆಂಡ್ಸ್ ʼಕ್ಲಾಸ್ ಆನ್ ವೀಲ್ಸ್ʼ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ಸಾಕ್ಷರತೆಯ ಬಸ್ ದ.ಕ.ಜಿ.ಪಂ.ಮಾ.ಉ.ಹಿ.ಪ್ರಾ. ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಯನ್ನು ಕೊಡುವ ಸಲುವಾಗಿ ಪ್ರಪ್ರಥಮವಾಗಿ ಆಗಮನವಾಯಿತು. ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಗಾರವನ್ನು ಟ್ರಸ್ಟಿನ ಶಿಕ್ಷಕರಾದ ವೀಕ್ಷಾ ಮತ್ತು ಚೈತ್ರ ನಡೆಸಿ ಕೊಟ್ಟರು. ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ ಡಾ.ಹಾಜಿ ಎಸ್ ಅಬೂಬಕರ್ ಆರ್ಲಪದವು ಅವರು ಪ್ರಾಸ್ತಾವಿಕ ಮಾತನಾಡಿ ಕಂಪ್ಯೂಟರ್ ಸಾಕ್ಷರತಾ ತಂಡಕ್ಕೆ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವಿಶಾಲಾಕ್ಷಿ, ಮಾಂಕು ಮೂಲ್ಯ, ವೆಂಕಟೇಶ, ಗೌರವ ಶಿಕ್ಷಕ ರಮ್ಯಾ , ಅಶ್ವಿನಿ , ಅಸ್ಮಿತ, ವಿಂದ್ಯಾರವರು ಉಪಸ್ಥಿತರಿದ್ದರು.