ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ ವಿಮೆಯ ಅಡಿಯಲ್ಲಿ ದಾವಣಗೆರೆ ಮೂಲದ ವ್ಯಕ್ತಿಯೋರ್ವರ ಮೂತ್ರನಾಳದಲ್ಲಿ ಕಲ್ಲಿನ ಯಶಸ್ವಿ ಶಸ್ತ್ರ ಚಿಕಿತ್ಸೆ

0

ಪುತ್ತೂರು: ಬೊಳುವಾರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂತ್ರನಾಳದಲ್ಲಿ ಕಲ್ಲಿನ ತೊಂದರೆಗೊಳಗಾಗಿದ್ದ ದಾವಣಗೆರೆ ಮೂಲದ ವ್ಯಕ್ತಿಯೋರ್ವರಿಗೆ ಆಯುಷ್ಮಾನ್ ಭಾರತ (ಆರೋಗ್ಯ ಕರ್ನಾಟಕ) ವಿಮೆಯ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ದಾವಣೆಗೆರೆ ಜಿಲ್ಲೆಯ ಯುವಕನೋರ್ವ ಮೂತ್ರನಾಳದಲ್ಲಿ ಕಲ್ಲಿನ ತೊಂದರೆಯನ್ನು ಅನುಭವಿಸಿದ್ದರು‌. ಹಲವಾರು ಸಮಯಗಳಿಂದ ಈ ತೊಂದರೆಯಿಂದ ಬಳಲುತ್ತಿದ್ದ ಅವರು ಪುತ್ತೂರಿನ ಬೊಳುವಾರಿನಲ್ಲಿರುವ ಪ್ರಗತಿ ಸ್ಪೇಷಾಲಿಟಿ ಆಸ್ಪತ್ರೆಯ ಯೂರಾಲಜಿ ವಿಭಾಗದ ಮುಖ್ಯಸ್ಥರಾಗಿರುವ ಡಾ.ಅಭಿಷ್ ಹೆಗ್ಡೆ ರವರನ್ನು ಭೇಟಿಯಾಗಿದ್ದರು. ರೋಗಿಯನ್ನು ಪರಿಶೀಲಿಸಿದ ವೈದ್ಯರು ಕಲ್ಲಿನ ಸಮಸ್ಯೆ ನೀಗಿಸಲು ಶಸ್ತ್ರಕ್ರಿಯೆ ನಡೆಸುವುದು ಅನಿವಾರ್ಯ ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಕಡು ಬಡವರಾಗಿರುವ ಅವರಿಗೆ ಡಾ.ಅಭಿಷ್ ಹೆಗ್ಡೆ ರವರು ಆಯುಷ್ಮಾನ್ ಭಾರತ(ಆರೋಗ್ಯ ಕರ್ನಾಟಕ) ವಿಮೆಯ ಅಡಿಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನಡೆಸಿದ್ದಾರೆ. ಇದಕ್ಕಿಂತ ಮೊದಲು ಹೊರ ಜಿಲ್ಲೆಗಳಿಂದ ಬಂದಿರುವ ಹಲವಾರು ರೋಗಿಗಳು ಯೂರಾಲಜಿ ಸಂಬಂಧಪಟ್ಟ ಶಸ್ತ್ರ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ (ಆರೋಗ್ಯ ಕರ್ನಾಟಕ)ದ ಅಡಿಯಲ್ಲಿ ಮಾಡಿಸಿಕೊಂಡು‌ ಅದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯೂರಾಲಜಿ ವಿಭಾಗದ ಮುಖ್ಯಸ್ಥರಾಗಿರುವ ಡಾ.ಅಭಿಷ್ ಹೆಗ್ಡೆ ರವರು ವಾರದ ಮೂರು ದಿನ ಸಾಯಂಕಾಲ ಲಭ್ಯರಿದ್ದು, ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಸಂಪೂರ್ಣ ಸುರಕ್ಷಾ ಮತ್ತು ಖಾಸಗಿ ವಿಮೆಯಿಂದಲೂ ಪ್ರಯೋಜನ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08251-231046, 231026 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here