ರಾಜ- ಮಹಾರಾಜ ಜೋಡುಕರೆ ಕಂಬಳಕ್ಕೆ ಚಿನ್ನದ ಮೆರುಗು – ಮುಳಿಯ ಜ್ಯುವೆಲ್ಸ್‌ ನಿಂದ ಆಭರಣಗಳ ಪ್ರದರ್ಶನ – ಮುಳಿಯ ಪ್ರಾಪರ್ಟೀಸ್‌ ಬಗ್ಗೆ ಮಾಹಿತಿ ಕೇಂದ್ರ

0

ಪುತ್ತೂರು: ನ.25,26ರಂದು ಬೆಂಗಳೂರಿನಲ್ಲಿ, ಬೆಂಗಳೂರು ಕಂಬಳ-ನಮ್ಮ ಕಂಬಳ ಟ್ಯಾಗ್‌ ಲೈನ್‌ ನೊಂದಿಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ-ಮಹಾರಾಜ ಜೋಡುಕರೆ ಕಂಬಳ ವೀಕ್ಷಿಸಲು ಎರಡು ದಿನಗಳಲ್ಲಿ ಸುಮಾರು 8 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಹುಟ್ಟು ಹಾಕಿದ್ದು, ಹಲವು ಉದ್ದಿಮೆ ಸಂಘ ಸಂಸ್ಥೆಗಳು ತಮ್ಮ ಸ್ಟಾಲ್‌ ಗಳನ್ನು ತೆರೆಯಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪುತ್ತೂರು ಮೂಲದ ಮುಳಿಯ ಸಂಸ್ಥೆ ತನ್ನ ಸ್ಟಾಲ್‌ ನ್ನು ಬೆಂಗಳೂರು ಕಂಬಳ ಮೈದಾನದಲ್ಲಿ ತೆರೆದಿದ್ದು, ರಾಜ್ಯಾದ್ಯಂತ ಹರಡಿರುವ ತಮ್ಮ ಗ್ರಾಹಕರು ಸೇರಿದಂತೆ ಆಸಕ್ತರಿಗೆ ಆಭರಣಗಳ ಬಗ್ಗೆ ಮತ್ತು ಪ್ರಾಪರ್ಟಿಸ್ ಬಗ್ಗೆ ಮಾಹಿತಿ ನೀಡಲಿದೆ. ಬೆಂಗಳೂರಿನಲ್ಲಿ ಶೋರೂಮ್‌ ಹೊಂದಿರುವ ಮುಳಿಯ ಜ್ಯುವೆಲ್ಸ್‌ ಕಂಬಳ ನಡೆಯುವ ಎರಡು ದಿನಗಳಲ್ಲಿ ಚಿನ್ನ, ವಜ್ರ , ಮತ್ತು ಪ್ಲಾಟಿನಂ ಆಭರಣಗಳ ಪ್ರದರ್ಶನ ನಡೆಸಲಿದೆ. ಮಾತ್ರವಲ್ಲ ಮುಳಿಯ ಪ್ರಾಪರ್ಟಿಸ್ ಮೂಲಕ ಹೂಡಿಕೆ ಮಾಡುವವರಿಗೆ ಅವಕಾಶವನ್ನು ತೆರೆದಿಟ್ಟಿದೆ.

ಖರೀದಿಯ ಉಮೇದು ಪ್ರತಿಯೊಬ್ಬರಿಗೂ ಇದೆ. ಆದರೆ ಖರೀದಿ ಎಂಬುವುದು ಇನ್ವೆಸ್ಟ್‌ ಮೆಂಟ್‌ ಎಂದಾಗಬೇಕಿದ್ದರೆ ನಿರ್ದಿಷ್ಟ ವಸ್ತುವನ್ನೇ ಖರೀದಿ ಮಾಡಬೇಕು, ನಿರ್ದಿಷ್ಟ ಜಾಗದಲ್ಲೇ ಇನ್ವೆಸ್ಟ್‌ ಮಾಡ ಬೇಕು. ನೀವೇನೂ ಖರೀದಿಸಿದರೂ ಮುಂದೊಂದು ದಿನ ಅದರ ಮೌಲ್ಯ ವರ್ಧನೆಯಾಗಬೇಕಿದ್ದರೆ ನಿಮಗೆ ಸರಿಯಾದ ತಾಣ ಮುಳಿಯ ಜ್ಯುವೆಲ್ಸ್‌ ಮತ್ತು ಮುಳಿಯ ಪ್ರಾಪರ್ಟೀಸ್‌. ಹೀಗಾದರೇ ನಿಮ್ಮ ಕೈಯ್ಯಲ್ಲಿ ಕಾಂಚಾಣ ಝಣ-ಝಣ ಎನ್ನುತ್ತದೆ. ಈ ಕನಸು ನನಸಾಗಬೇಕಿದ್ದಲ್ಲಿ ರಾಜ-ಮಹಾರಾಜ ಜೋಡು ಕರೆ ಕಂಬಳ ಮೈದಾನದಲ್ಲಿರುವ ಮುಳಿಯ ಸಂಸ್ಥೆಯ ಸ್ಟಾಲ್‌ ಗೆ ಭೇಟಿ ಕೊಡಲು ಮರೆಯದಿರಿ.

LEAVE A REPLY

Please enter your comment!
Please enter your name here