ಸಾಲ್ಮರದಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಮಹಿಳೆ ಪ್ರಕರಣಕ್ಕೆ ಟ್ವಿಸ್ಟ್ – ಮತ್ತುಬರುವ ಪಾನೀಯ ಕುಡಿಸಿ ಅಪಹರಣ, ಅತ್ಯಾಚಾರಕ್ಕೆ ಯತ್ನ – ಮಹಿಳೆಯ ಹೇಳಿಕೆ

0

ಪುತ್ತೂರು: ಅಪರಿಚಿತ ವ್ಯಕ್ತಿಯೊಬ್ಬ ಮತ್ತುಬರಿಸುವ ಪಾನೀಯ ಕುಡಿಸಿ ಅಪಹರಣ ಮಾಡಿ, ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ಸಾಲ್ಮರದ ಗುಂಪಕಲ್ಲಿನಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಮೂಲತಃ ಚನ್ನರಾಯಪಟ್ಟಣದ ಮಂಜುಳಾ (38) ಎಂಬವರು ನ.24ರ ರಾತ್ರಿ ಅಸ್ವಸ್ಥಗೊಂಡು ಸಾಲ್ಮರ ಗುಂಪಕಲ್ಲಿನಲ್ಲಿ ರಸ್ತೆ ಬದಿ ಬಿದಿದ್ದರು. ಪೊಲೀಸರು ಆಕೆಯನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದರು. ಮಹಿಳೆಯ ಸ್ಥಿತಿಯನ್ನು ಗಮನಿಸಿದ ಪೊಲೀಸರು ಆಕೆಯನ್ನು ಕಿಡ್ನಾಪ್ ಮಾಡಿ ಯಾರೋ ಅಲ್ಲಿ ಬಿಟ್ಟು ಹೋಗಿದ್ದಾರೆಂಬ ಶಂಕೆಯಿಂದ ರಾತ್ರಿ ಆಸ್ಪತ್ರೆಯಲ್ಲಿ ಬೀಡು ಬಿಟ್ಡಿದ್ದರು. ಇಂದು ಸುಧಾರಿಸಿಕೊಳ್ಳುತ್ತಿರುವ ಮಹಿಳೆ ಅಪರಿಚಿತ ವ್ಯಕ್ತಿಯೊಬ್ಬ ಮತ್ತುಬರುವ ಪಾನೀಯ ಕುಡಿಸಿ ಅಪಹರಣ ಮಾಡಿ ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

ನ.24 ರಂದು ರಾತ್ರಿ ತನ್ನನ್ನು ಅಪರಿಚಿತ ವ್ಯಕ್ತಿಯೊಬ್ಬ ಪುತ್ತೂರು ಬಸ್ ನಿಲ್ದಾಣದಿಂದ ಆಟೋ ರಿಕ್ಷಾವೊಂದರಲ್ಲಿ ಕರೆದೊಯ್ದು ಮತ್ತುಬರುವ ಪಾನೀಯ ಕುಡಿಸಿದ್ದಾರೆ. ಈ ವೇಳೆ ಪ್ರಜ್ಞೆ ತಪ್ಪಿದ ನನಗೆ ಮುಂದೇನಾಯಿತೆಂದು ಗೊತ್ತಿಲ್ಲ. ರಾತ್ರಿ ಹೊತ್ತು ನಾನು ರಸ್ತೆ ಬದಿಯಲ್ಲಿ ಬಿದ್ದಿದ್ದೆ. ಬಳಿಕ‌ ಪೊಲೀಸರು ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿ ನನ್ನ ಸರ ಮತ್ತು ಬಳೆ ದರೋಡೆ ಮಾಡಿದ್ದಾರೆಂದು ಮಹಿಳೆ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here