ರಾಜ್ಯ ಮಟ್ಟದ ಕಬಡ್ಡಿ: ರಾಮಕುಂಜ ಕ.ಮಾ.ಪ್ರೌಢ ಶಾಲೆ ದ್ವಿತೀಯ – ನಾಲ್ವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

0

ರಾಮಕುಂಜ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಡ್ಯ ಇವರ ಆಶ್ರಯದಲ್ಲಿ ಮಂಡ್ಯ ನಾಗಮಂಗಲ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ವಿದ್ಯಾಸಂಸ್ಥೆಯಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ತಂಡದ ನಾಯಕ ಕಾರ್ತಿಕ್ ಬೆಸ್ಟ್ ರೈಡರ್ ಪ್ರಶಸ್ತಿ ಪಡೆದರು. ಪ್ರೀತಮ್, ಸತ್ಯ, ಶ್ರೇಯಸ್, ಹಿತೇಶ್, ನಿತೇಶ್ ಗೌಡ, ಯಶವಂತ, ಮೌನೇಶ್, ದಿಲೀಪ್, ಮಹಮ್ಮದ್ ರೈಜ್, ಕೃತಿಕ್, ನಿಖಿಲ್ ಎನ್ ಡಿ, ಸಂನ್ವಿತ್ ತಂಡವನ್ನು ಪ್ರತಿನಿಧಿಸಿದ್ದರು. ಈ ಪೈಕಿ ಕಾರ್ತಿಕ್, ಶ್ರೇಯಸ್, ಸತ್ಯ ಮತ್ತು ಹಿತೇಶ್ ಎನ್ ಕೆ. ಅವರು ರಾಷ್ಟ್ರಮಟ್ಟದ ಕಬಡ್ಡಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ತಂಡಕ್ಕೆ ಮಾಧವ ಬಿ.ಕೆ, ಜಸ್ವಂತ್ ಹಾಗೂ ಮಂಜುನಾಥ್‌ರವರು ತರಬೇತಿ ನೀಡಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಪುತ್ತೂರಿನ ಎಸ್‌ಆರ್‌ಕೆ ಲ್ಯಾಡಾರ್ಸ್‌ನ ಮಾಲಕರಾದ ಕೇಶವ ಎ ಹಾಗೂ ಪಿಡಬ್ಲ್ಯುಡಿ ಇಂಜಿನಿಯರ್ ಪ್ರಮೋದ್‌ರವರು ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಮ್ಯಾಟ್ ವ್ಯವಸ್ಥೆ ಮಾಡಿ ಸಹಕರಿಸಿದರು. ಶಾಲಾ ಮುಖ್ಯಗುರು ಸತೀಶ್ ಭಟ್, ಶಾಲಾ ಶಿಕ್ಷಕ ವೃಂದ, ಆಡಳಿತ ಮಂಡಳಿಯವರು, ಶಾಲಾ ಪೋಷಕರು, ಹಿರಿಯ ವಿದ್ಯಾರ್ಥಿ ಸಂಘದವರು ಸಹಕರಿಸಿದ್ದರು.

LEAVE A REPLY

Please enter your comment!
Please enter your name here