ನ.26ರಂದು ಪುತ್ತಿಲ ಪರಿವಾರದಿಂದ ಶ್ರೀ ಸತ್ಯನಾರಾಯಣ ಪೂಜೆ, ಬೃಹತ್ ಹಿಂದೂ ಸಂಗಮ

0

ಉಪ್ಪಿನಂಗಡಿ: ಪುತ್ತಿಲ ಪರಿವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಉಪ್ಪಿನಂಗಡಿಯ ವತಿಯಿಂದ ಹಿಂದೂ ಸಮಾಜದ ಐಕ್ಯತೆಗಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ನ.26ರಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ.

ನ.26ರಂದು ಮಧ್ಯಾಹ್ನ 2ರಿಂದ ಭಜನಾ ಕಾರ್ಯಕ್ರಮ, ಸಂಜೆ 4ರಿಂದ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭಗೊಂಡು ಸಂಜೆ 6 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. 6:3೦ಕ್ಕೆ ಬೃಹತ್ ಹಿಂದೂ ಸಂಗಮ ನಡೆಯಲಿದ್ದು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಮಹೇಂದ್ರವರ್ಮ ಪಡ್ಪು ಅಧ್ಯಕ್ಷತೆ ವಹಿಸಲಿದ್ದಾರೆ. ಗುರುಪುರ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಉಪನ್ಯಾಸಕ ಆದರ್ಶ ಗೋಖಕೆ ದಿಕ್ಸೂಚಿ ಭಾಷಣ ಮಾಡಲಿದ್ದು, ಪೂಜಾ ಸಮಿತಿಯ ಗೌರವಾಧ್ಯಕ್ಷ ಡಿ. ಚಂದಪ್ಪ ಮೂಲ್ಯ, ಪುತ್ತೂರು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಉದ್ಯಮಿಗಳಾದ ಡಿ. ಕಿರಣ್‌ಚಂದ್ರ, ನಟೇಶ್ ಪೂಜಾರಿ, 34 ನೆಕ್ಕಿಲಾಡಿ ಗ್ರಾ.ಪಂ.ನ ನಿಕಟಪೂರ್ವ ಉಪಾಧ್ಯಕ್ಷೆ ಸ್ವಪ್ನ ಜೀವನ್, ಕೋಡಿಂಬಾಡಿ ಗ್ರಾ.ಪಂ.ನ ನಿಕಟಪೂರ್ವ ಉಪಾಧ್ಯಕ್ಷೆ ಉಷಾ ಲಕ್ಷಣ್ ಬೆಳ್ಳಿಪ್ಪಾಡಿ ಗೌರವ ಉಪಸ್ಥಿತಿ ಇರಲಿದ್ದಾರೆ. ರಾತ್ರಿ 8 ರಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪೂಜಾ ಸಮಿತಿಯ ಅಧ್ಯಕ್ಷರಾಗಿ ಮಹೇಂದ್ರ ವರ್ಮ ಪಡ್ಪು, ಗೌರವಾಧ್ಯಕ್ಷರಾಗಿ ಡಿ. ಚಂದಪ್ಪ ಮೂಲ್ಯ, ಪ್ರಧಾನ ಕಾರ್ಯದರ್ಶಿಯಾಗಿ ಕಿಶೋರ್ ಜೋಗಿ, ಕೋಶಾಧಿಕಾರಿಯಾಗಿ ಸುಚಿತ್ ಬೊಳ್ಳಾವು, ಉಪಾಧ್ಯಕ್ಷರಾಗಿ ಹರಿಕೃಷ್ಣ ಕಾಂಚನ, ಎನ್. ರಾಜಗೋಪಾಲ ಹೆಗ್ಡೆ, ರಮೇಶ್ ಬಂಡಾರಿ, ರಾಜೇಶ್ ಶಾಂತಿನಗರ, ವಸಂತ ಪೆರ್ನೆ, ರವೀಂದ್ರ ರೈ, ಹರೀಶ್ ನಟ್ಟಿಬೈಲು, ಕಾರ್ಯದರ್ಶಿಗಳಾಗಿ ಅಶೋಕ್ ಬೆದ್ರೋಡಿ, ರಾಜೇಶ್ ಕೊಡಂಗೆ, ಸ್ವಪ್ನ ಜೀವನ್, ಅಶೋಕ್ ಪಡ್ಪು, ಜಯಂತ ಪೆರ್ನೆ, ಮೋಹನ್ ಬಂಡಾಡಿ, ಗೌರವ ಸಲಹೆಗಾರರಾಗಿ ಪ್ರಶಾಂತ್ ನೆಕ್ಕಿಲಾಡಿ, ಚಿದಾನಂದ ಪಂಚೇರು, ಸಂದೀಪ್ ಕುಪ್ಪೆಟ್ಟಿ, ದಯಾನಂದ ಆರಾಲು, ಕಾರ್ಯಕಾರಿಣಿ ಸದಸ್ಯರಾಗಿ ಲಕ್ಷ್ಮಣ ನೆಡ್ಚಿಲು, ಮೋಹನ್‌ದಾಸ್ ಕಾಮತ್, ರಾಜೇಶ್ ಬೆದ್ರೋಡಿ, ಪ್ರವೀಣ್ ನೆಕ್ಕಿಲಾಡಿ, ಪ್ರಚಾರ ಸಮಿತಿಯಲ್ಲಿ ಮೋಹನ್ ಬಂಡಾಡಿ, ದೀಕ್ಷಿತ್ ಹೆನ್ನಡ್ಕ, ರಾಜೇಶ್ ಕೊಡಂಗೆ, ಗಂಗಾಧರ ನೆಕ್ಕಿಲಾಡಿ, ಯತೀಶ ಬೆದ್ರೋಡಿ ಆಯ್ಕೆಯಾಗಿದ್ದಾರೆ. ಹಾಗೂ ಗ್ರಾಮ ಸಮಿತಿ, ಉಪ ಸಮಿತಿ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಪುತ್ತಿಲ ಪರಿವಾರ ಬಜತ್ತೂರು, ಹಿರೇಬಂಡಾಡಿ, ಉಪ್ಪಿನಂಗಡಿ, ನೆಕ್ಕಿಲಾಡಿ, ಪೆರ್ನೆ ಸಹಕಾರ ನೀಡಲಿದ್ದಾರೆ.

LEAVE A REPLY

Please enter your comment!
Please enter your name here