ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಲಕ್ಕಿ ಕೂಪನ್ ಬಂಪರ್ ಡ್ರಾ

0

ಪುತ್ತೂರು: ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್‌ನಲ್ಲಿ ವರ್ಷಂಪ್ರತಿಯಂತೆ ದೀಪಾವಳಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾದ ಲಕ್ಕಿ ಕೂಪನ್ ಬಂಪರ್ ಡ್ರಾ ನ.25 ರಂದು ಪುತ್ತೂರು ದರ್ಬೆಯಲ್ಲಿರುವ ಐಕೆ ಮಾಲ್‌ನಲ್ಲಿ ನೆರೆದಿರುವ ಗ್ರಾಹಕರ ಸಮ್ಮುಖದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಗ್ರಾಹಕರಾದ ಎ.ಜೆ.ರೈ ಮತ್ತು ಇತರ ಗ್ರಾಹಕರು ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ ವಾಮನ್ ಪೈರವರು ಪ್ರಥಮ ಬಹುಮಾನ ಸೈಡ್ ಬೈ ಸೈಡ್ ರೆಪ್ರಿಜರೇಟರ್ ಡ್ರಾ. ನೆರವೇರಿಸಿದರು. ಇತರ ಗಣ್ಯರು ದ್ವಿತೀಯ ಬಹುಮಾನ ಕಾರ್ನರ್ ಸೋಫಾಸೆಟ್, ತೃತೀಯ ಬಹುಮಾನ 32″ಎಲ್‌ಇಡಿ ಟಿವಿ, ಚತುರ್ಥ ಬಹುಮಾನ ಮಿಕ್ಸರ್ ಗ್ರೈಂಡರ್ ಹಾಗೂ 37 ಆಕರ್ಷಕ ಬಹುಮಾನಗಳ ಡ್ರಾ.ನೆರೆವೇರಿಸಿದರು. ಈ ಸಂದರ್ಭದಲ್ಲಿ ಶಿವರಾಮ್ ರೈ, ಯೂಸುಫ್ ನೇರಳಕಟ್ಟೆ, ಅಮನ್ ಟ್ರೇಡರ‍್ಸ್‌ನ ಮನ್ಸೂರ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಮಾಲಕರಾದ ಇಸ್ಮಾಯಿಲ್ ಕೆ.ಎಮ್., ಜಬ್ಬಾರ್, ನವಾಝ್ ಗ್ರಾಹಕರನ್ನು ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here