ನಾಳೆ(ನ.27) ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

0

ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನ.27ರಂದು ಕಾರ್ತಿಕ ದೀಪೋತ್ಸವವು ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.


ಬೆಳಿಗ್ಗೆ ಗಣಪತಿಹವನ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಶ್ರೀ ದೇವಿಗೆ ಕಾರ್ತಿಕ ಮಾಸದ ವಿಶೇಷ ಕಾರ್ತಿಕ ಪೂಜೆ ಸೇವೆ, ರಂಗಪೂಜೆ ಸೇವೆ, ದೈವಗಳಿಗೆ ತಂಬಿಲ ಹಾಗೂ ಕ್ಷೇತ್ರದ ಭಕ್ತರಿಂದ ಸುಮಾರು 1000 ಕ್ಕೂ ಮಿಕ್ಕಿದ ಹಣತೆ ದೀಪಗಳನ್ನು ಹಚ್ಚುವ ಮೂಲಕ ದೀಪೋತ್ಸವ ನಡೆಯಲಿದೆ. ಕಾರ್ತಿಕ ಪೂಜೆ ಸೇವೆ ಹಾಗೂ ರಂಗಪೂಜೆ ಸೇವೆ ಮಾಡಿಸಲಿಚ್ಚಿಸುವ ಭಕ್ತಾದಿಗಳು ಸಂಜೆ 6:00 ಗಂಟೆಗೆ ದೇವಳದಲ್ಲಿ ಉಪಸ್ಥಿತರಿರುವಂತೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here