ಪುತ್ತೂರು: ನ. 24 ರಂದು ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ ಯಕ್ಷಗಾನ ಭಾಗವತಿಕೆ ಸ್ಪರ್ಧೆಯಲ್ಲಿ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಪ್ರಾಪ್ತಿ ಟಿ.ಶೆಟ್ಟಿ ರವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ತಾರಾನಂದ ಶೆಟ್ಟಿ ಮತ್ತು ಶಾಂಭವಿ ಟಿ.ಶೆಟ್ಟಿ ಕುದ್ಕಾಡಿರವರ ಪುತ್ರಿ.