




ನೆಲ್ಯಾಡಿ: ವಾಹನ ಚಾಲನೆ ವಿಚಾರದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಇಚ್ಲಂಪಾಡಿ ನಿವಾಸಿ, ರಿಕ್ಷಾ ಚಾಲಕ ಕೇಶವ ಎಂಬವರು ನೀಡಿದ ದೂರಿನಂತೆ ಸನೋಜ್ ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.




ನ.1ರಂದು ಸಂಜೆ ಬಾಡಿಗೆ ನಿಮಿತ್ತ ಅಟೋರಿಕ್ಷಾದಲ್ಲಿ ಶಬರೀಶ ಮತ್ತು ಕೇಶವ ಎಂಬವರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಇಚ್ಲಂಪಾಡಿ ಗ್ರಾಮದ ಲಾವತಡ್ಕದ ರುದ್ರಮಜಲು ಎಂಬಲ್ಲಿಗೆ ತಲುಪಿದಾಗ ಸನೋಜ್ ಎಂಬಾತ ದ್ವಿಚಕ್ರ ವಾಹನವೊಂದರಲ್ಲಿ ಬಂದು ವಾಹನ ಚಾಲನೆಯ ವಿಚಾರವಾಗಿ ತಕರಾರು ತೆಗೆದು, ಅವಾಚ್ಯ ಶಬ್ದಗಳಿಂದ ಬೈದು ಮುಖಕ್ಕೆ ಕೈಯಿಂದ ಗುದ್ದಿ ದೂಡಿ ಹಾಕಿರುವುದಾಗಿ ಕೇಶವ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಂತೆ ಸನೋಜ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 161/2023 ಕಲಂ: 504, 323 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.










