ಪುತ್ತೂರು: ಪುತ್ತೂರು ದರ್ಬೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ 27ನೇ ವಾರ್ಷಿಕೋತ್ಸವದ ಅಂಗವಾಗಿ ನ.26ರಂದು ಬಪ್ಪಳಿಗೆ ಜೈನ ಭವನದಲ್ಲಿ ನಡೆದ ಸಂಗೀತ – ನೃತ್ಯ ಸಂಭ್ರಮ ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತಮ್ಮ ನೃತ್ಯ ಪ್ರದರ್ಶನ ನೀಡಿದರು.
ಆರಂಭದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಂಚಾಲಕಿ ಪ್ರಭಾ ಬಿ ಶಂಕರ್ ನಟರಾಜ ವಿಗ್ರಹದ ಮುಂದೆ ದೀಪ ಪ್ರಜ್ವಲಿಸಿದರು ಬಳಿಕ ಸುಮಾರು 20 ವಿದ್ಯಾರ್ಥಿಗಳಿಗೆ ಸಾಮೂಹಿಕ ಸಂಗೀತ ಕಾರ್ಯಕ್ರಮ ನಡೆಯಿತು. ನಂತರ ನೂರಕ್ಕು ಮಿಕ್ಕಿ ವಿದ್ಯಾರ್ಥಿಗಳಿಗೆ ನೃತ್ಯಪ್ರದರ್ಶನ ನಡೆಯಿತು.