ಬೆಂಗಳೂರು ಕಂಬಳ:ರಾಜ-ಮಹಾರಾಜ ಜೋಡುಕರೆ ಕಂಬಳ ಕೂಟದ ಫಲಿತಾಂಶ

0

ಪುತ್ತೂರು: ಅದ್ದೂರಿಯಾಗಿ ಎರಡು ದಿನಗಳ ಕಾಲ ಅಂದರೆ ಹಗಲು ರಾತ್ರಿ ನಿರಂತರ 40 ಗಂಟೆಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ಕಂಬಳ – ನಮ್ಮ ಕಂಬಳ ಕ್ಕೆ ನ. 27 ರಂದು ಮುಂಜಾನೆ ತೆರೆ ಕಂಡಿತು. ಒಟ್ಟು 159 ಜೋಡಿ ಕೋಣಗಳು ಕೂಟದಲ್ಲಿ ಭಾಗವಹಿಸಿದವು. ಕಂಬಳ ಯಶಸ್ವಿಯಾದ ಸಾರ್ಥಕ್ಯದ ಭಾವ ಕಂಬಳ ಸಮಿತಿಯವರಲ್ಲಿ ಎದ್ದುಕಂಡಿತು. ಕೂಟ ತೆರೆಕಾಣುವ ಮುಂಜಾನೆ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ, ಉಪಾಧ್ಯಕ್ಷ ಗುಣರಂಜನ್ ಶೆಟ್ಟಿ, ಮುರಳೀಧರ ರೈ ಮಠಂತಬೆಟ್ಟು ಸೇರಿದಂತೆ ಕಂಬಳ ಸಮಿತಿಯವರು, ಕಾರ್ಯಕರ್ತರು ಕುಣಿದಾಡಿದರು. ಎಲ್ಲರೂ ರಾಜ ಮಹಾರಾಜ ಕರೆಯ ಬದಿಯಲ್ಲಿ ರೌಂಡಪ್ ಹೊಡೆದು ಕೂಟಕ್ಕೆ ವಿರಾಮ ನೀಡಿದರು. ಲಕ್ಷಾಂತರ ಮಂದಿ ಆಗಮಿಸಿ ಕಂಬಳ ವೀಕ್ಷಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ
ಕನೆಹಲಗೆ:
ಪ್ರಥಮ: ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ ಬಿ (6.5 ಕೋಲು ನಿಶಾನೆಗೆ ನೀರು ಹಾಯಿಸಿದ ಕೋಣಗಳು)
ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್


ಅಡ್ಡ ಹಲಗೆ:
ಪ್ರಥಮ: ಎಸ್. ಎಮ್. ಎಸ್ ಫ್ಯಾಮಿಲಿ ಬೆಂಗಳೂರು
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ


ಹಗ್ಗ ಹಿರಿಯ:
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ ‘ಸಿ’
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್


ಹಗ್ಗ ಕಿರಿಯ:
ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ
ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್
ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ ಎ
ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್


ನೇಗಿಲು ಹಿರಿಯ:
ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ
ಓಡಿಸಿದವರು: ಸರಪಾಡಿ ಧನಂಜಯ ಗೌಡ
ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ. ಶೆಟ್ಟಿ
ಓಡಿಸಿದವರು: ಪಟ್ಟೆ ಗುರು ಚರಣ್


ನೇಗಿಲು ಕಿರಿಯ:
ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ
ಕನೆಹಲಗೆ: 07 ಜೊತೆ ಅಡ್ಡಹಲಗೆ: 06 ಜೊತೆ
ಹಗ್ಗ ಹಿರಿಯ: 21 ಜೊತೆ ನೇಗಿಲು ಹಿರಿಯ: 32 ಜೊತೆ
ಹಗ್ಗ ಕಿರಿಯ: 31 ಜೊತೆ ನೇಗಿಲು ಕಿರಿಯ: 62 ಜೊತೆ
ಒಟ್ಟು ಕೋಣಗಳ ಸಂಖ್ಯೆ: 159 ಜೊತೆ

ನೇಗಿಲು ಕಿರಿಯದಲ್ಲಿ ದಾಖಲೆ ಮಾಡಿದ ಕಿಶೋರ್ ಬೊಟ್ಯಾಡಿಯವರ ಹೊನ್ನು ಮತ್ತು ಕುಂಞ
ಬೆಂಗಳೂರು ಕಂಬಳದ ನೇಗಿಲು ಕಿರಿಯ ವಿಭಾಗದಲ್ಲಿ ಪುತ್ತೂರಿನ ಜೈ ತುಳುನಾಡು ಪುಣ್ಕೆತ್ತಡಿ ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿಯವರ ಕೋಣಗಳು 9.09 ಸೆಕೆಂಡ್‌ನಲ್ಲಿ ಗುರಿಮುಟ್ಟಿ ಮೆಡಲ್ ಪಡೆದು ದಾಖಲೆ ಮಾಡಿತು. ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿಯವರ ಕೋಣಗಳ ಸವಾಲನ್ನು ಮೆಟ್ಟಿ ಜೈ ತುಳುನಾಡು ಮೆಡಲ್ ಪಡೆಯಿತು. ಮುಂದಿನ ಕಂಬಳಗಳಲ್ಲಿ ಹೆಚ್ಚಿನ ಮೆಡಲ್ ಪಡೆಯುವ ಭರವಸೆಯಿದೆ ಎಂದು ಕಿಶೋರ್ ಬೊಟ್ಯಾಡಿ ಈ ವೇಳೆ ಪ್ರತಿಕ್ರಿಯಿಸಿದರು. ಕೃತಿಕ್ ಗೌಡರವರು ಕೋಣಗಳನ್ನು ಓಡಿಸಿದ್ದಾರೆ. ಮೂರು ವರ್ಷಗಳಿಂದ ಹೊನ್ನು ಮತ್ತು ಕುಂಞ ಹೆಸರಿನ ಕೋಣಗಳನ್ನು ಇವರು ಸಾಕಿ ಸಲಹುತ್ತಿದ್ದಾರೆ. ಸಬ್ ಜ್ಯೂನಿಯರ್‌ನಲ್ಲಿ ಕಾವಳಕಟ್ಟೆಯಲ್ಲಿ ಬಹುಮಾನ ಪಡೆದಿದ್ದವು. ದಾಖಲೆ ಮತ್ತು ಬಹುಮಾನ ಪಡೆದಿರುವುದಕ್ಕೆ ಜೈ ತುಳುನಾಡು ತಂಡದವರು ಸಂತಸ ವ್ಯಕ್ತಪಡಿಸಿದ್ದಾರೆ.

ಕಿಂಚಿತ್ತೂ ತೊಂದರೆಯಾಗದೆ ಬೆಂಗಳೂರು ಕಂಬಳ ಯಶಸ್ವಿ – ಅಶೋಕ್ ರೈ
ಬೆಂಗಳೂರಿನ ಇತಿಹಾಸದ ಪುಟಗಳಲ್ಲಿ ಬರೆಯುವ ರೀತಿಯಲ್ಲಿ ಕಂಬಳವಾಗಬೇಕು ಎಂಬ ಆಶಯವಿತ್ತು. ರಾಜ್ಯ ದೇಶವ್ಯಾಪಿಯಿಂದ ಜನರು ಬಂದು ವೀಕ್ಷಿಸಿದ್ದಾರೆ. 15 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ವಿಶ್ವಕ್ಕೆ ತೋರಿಸುವ ಕೆಲಸ ಆಗಿದೆ. ವೀರ ಕ್ರೀಡೆಯನ್ನು ದೇಶಕ್ಕೆ ಪರಿಚಯಿಸಲಾಗಿದೆ. ಯಾವುದೇ ತೊಂದರೆಯಾಗದ ರೀತಿಯಲ್ಲಿ ಕಂಬಳ ಯಶಸ್ವಿಯಾಗಿ ನಡೆದಿದೆ. ಮಣ್ಣಿನ ಸಂಬಂಧ, ದೈವ ದೇವರುಗಳ ಅನುಗ್ರಹದಿಂದ ರಾಜಧಾನಿಯಲ್ಲಿ ಕಂಬಳ ಕಾರ್ಯಕ್ರಮ ಯಶಸ್ವಿಯಾಗಿದೆ. ಧನ್ಯತಾ ಭಾವವಿದೆ. ಕರಾವಳಿಯ ಎಲ್ಲಾ ಜನರು ಇದಕ್ಕೆ ಸಹಕಾರ ನೀಡಿದ್ದಾರೆ. ಅಪಸ್ವರ ಇರುವುದು ಸಹಜ. ಅದನ್ನು ನಮ್ಮ ಪರಸ್ವರ ಮಾಡಿಕೊಂಡಿದ್ದೇವೆ. ಕರ್ನಾಟಕ ಸರಕಾರ, ಜಸ್ಟೀಸ್‌ಗಳು ನೋಡುವ ರೀತಿಯಲ್ಲಿ ಬೆಂಗಳೂರು ಕಂಬಳ ನಡೆದಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈಯವರು ಕಂಬಳ ಕೂಟ ತೆರೆಕಂಡ ನ. 27 ರ ಮುಂಜಾನೆ 5 ಗಂಟೆಗೆ ‘ಸುದ್ದಿ’ಯೊಂದಿಗೆ ಪ್ರತಿಕ್ರಿಯಿಸಿದರು.

LEAVE A REPLY

Please enter your comment!
Please enter your name here