ಮನೆಯಂಗಳಕ್ಕೆ ಬಂದು ಅಡಿಕೆ ಕಳವಿಗೆ ಯತ್ನ -ತಲವಾರ್‌ನಿಂದ ಹಲ್ಲೆ ಪ್ರಕರಣ: ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ

0

ಸವಣೂರು:ಕಾರು,ಸ್ಕೂಟರೊಂದರಲ್ಲಿ ಮನೆಯಂಗಳಕ್ಕೆ ಬಂದ ಅಪರಿಚಿತರೀರ್ವರು ಅಡಿಕೆ ಕಳ್ಳತನ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಮನೆ ಮಾಲಕರ ಪುತ್ರನಿಗೆ ತಲವಾರ್‌ನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಸವಣೂರು ಪಣೆಮಜಲು ಎಡಪತ್ಯ ಫಾರ್ಮ್ಸ್ ನಿವಾಸಿ, ಪ್ರಗತಿಪರ ಕೃಷಿಕರಾಗಿರುವ ಎ.ಆರ್.ಚಂದ್ರ ಅವರ ಮಗ ನಿಷ್ಕಲ್‌ರಾಮ ಹಲ್ಲೆಗೊಳಗಾದವರು.ಈ ಕುರಿತು ಎ.ಆರ್.ಚಂದ್ರ ಅವರು ನೀಡಿರುವ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನ.25ರಂದು ಮುಂಜಾನೆ 3.30ರ ಸುಮಾರಿಗೆ ಅವರ ಮನೆಯಲ್ಲಿ ಘಟನೆ ನಡೆದಿತ್ತು.ಸ್ಕೂಟರ್, ಕಾರಲ್ಲಿ ಬಂದಿದ್ದ ಅಪರಿಚಿತರಿಬ್ಬರು ಮನೆಯಂಗಳದಿಂದ ಅಡಿಕೆ ಕಳವು ಮಾಡಿ ವಾಹನದಲ್ಲಿ ತುಂಬಿಸುತ್ತಿದ್ದಾಗ ನಿಷ್ಕಲ್‌ರಾಮ ಅವರು ವಿಚಾರಿಸಿದ ವೇಳೆ ಅವರಿಗೆ ಬೆದರಿಸಿ, ತಲ್ವಾರ್‌ನಿಂದ ಹಲ್ಲೆ ನಡೆಸಿದ್ದರು.ಬಳಿಕದ ಬೆಳವಣಿಗೆಯಲ್ಲಿ ಓರ್ವ ಆರೋಪಿ ಕಳವು ಮಾಡಿದ್ದ ಅಡಿಕೆಯೊಂದಿಗೆ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದ.ಕಾರಲ್ಲಿ ಅಡಿಕೆ ತುಂಬಿಸಿ ಪರಾರಿಯಾಗಲೆತ್ನಿಸಿದ್ದ ಬಶೀರ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು.ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಽಸಲಾಗಿದೆ.

ಪರಾರಿಯಾಗಿರುವಾತನ ಬಗ್ಗೆ ತಪ್ಪು ಮಾಹಿತಿ ನೀಡಿದ ಆರೋಪಿ?
ಬಶೀರ್ ಸೆರೆಯಾಗುವ ಮೊದಲೇ ಆತನ ಜೊತೆಗೆ ಬಂದಿದ್ದ ಓರ್ವ ಸ್ಕೂಟರ್‌ನಲ್ಲಿ ಅಡಿಕೆ ತುಂಬಿಸಿಕೊಂಡು ಪರಾರಿಯಾಗಿದ್ದ.ಪರಾರಿಯಾಗಿರುವಾತನ ಹೆಸರು ಹಕೀಂ ಎಂದು ಬಶೀರ್ ಮಾಹಿತಿ ನೀಡಿದ್ದ.ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ಹಕೀಂ ಎಂಬವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ,ಕೃತ್ಯದಲ್ಲಿ ಹಕೀಂ ಅವರ ಪಾತ್ರವಿರುವುದು ಕಂಡು ಬಂದಿಲ್ಲ.ಆರೋಪಿ ಬಶೀರ್ ಸುಳ್ಳು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ.ಹಕೀಂ ಮತ್ತು ಬಶೀರ್‌ಗೆ ಮನಸ್ತಾಪವಿದ್ದು ಈ ಕಾರಣಕ್ಕಾಗಿ ಬಶೀರ್ ಉದ್ದೇಶಪೂರ್ವಕವಾಗಿ ಹಕೀಂ ಅವರ ಹೆಸರನ್ನು ನೀಡಿದ್ದಾಗಿ ಹೇಳಲಾಗುತ್ತಿದೆ.ಪೊಲೀಸರು ಹಕೀಂ ಅವರನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.ಪರಾರಿಯಾಗಿರುವ ಆರೋಪಿಗಾಗಿ ಶೋಧ ಮುಂದುವರಿದಿದೆ.

LEAVE A REPLY

Please enter your comment!
Please enter your name here