ಪುತ್ತೂರು ಗ್ರಹಚಾರ ಚಿತ್ರದ ಹಾಡು ಬಿಡುಗಡೆ

0

ಪುತ್ತೂರು: ಜನರ ಕುತೂಹಲಕ್ಕೆ ಕಾರಣವಾಗಿದ್ದ ಗ್ರಹಚಾರ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮ ನ.25ರಂದು ಪುತ್ತೂರು ಲಯನ್ಸ್ ಕ್ಲಬ್ ನಲ್ಲಿ ನಡೆಯಿತು .
ಈ ಸಂಧರ್ಭಲ್ಲಿ ಹಿರಿಯ ಕನ್ನಡ ತುಳು ಚಲನ ಚಿತ್ರ ನಟ ರಮೇಶ್ ರೈ ಕುಕ್ಕುವಳಿ ಮಾತನಾಡಿ, ಒಳ್ಳೆಯ ಕಲಾವಿದರು ಸಣ್ಣ ಸಣ್ಣ ಪ್ರಯತ್ನದೊಂದಿಗೆ ಸಿನಿಮಾದಂತಹಾ ಸಾಧನೆ ಮಾಡಲು ಸಾಧ್ಯ. ಅಂತಹದ್ದರಲ್ಲಿ ಕೀರ್ತನ್ ಶೆಟ್ಟಿ ಹಾಗೂ ಅನೀಲ್ ರೈ ಪೇರಿಗೇರಿ ಅವರು ತುಂಬಾ ಅಚ್ಚುಕಟ್ಟಾಗಿ ಇದನ್ನು ನಿರ್ದೇಶಿಸಿದ್ದಾರೆ ಎಂದು ಹೇಳಿದರು.

ನಿರ್ದೇಶಕನ ಒಳಗೆ ನಟ, ನಟನ ಒಳಗೆ ನಿರ್ದೇಶಕ, ಛಾಯಾಗ್ರಾಹಕನ ಒಳಗೆ ನಟ ಹೀಗೆ ಅಡಗಿರುವ ಕಲೆಯನ್ನು ಪ್ರತಿಸಲವೂ ಹೊಸ ಸಾಧನೆಯೊಂದಿಗೆ ಕೀರ್ತನ್ ಶೆಟ್ಟಿ ಸುಳ್ಯ ಮತ್ತು ಅವರ ತಂಡ ನಮ್ಮ ಮುಂದೆ ನೀಡುತ್ತಾ ಬರುತ್ತಿದೆ. ಆಲ್ಬಮ್ ಸಾಂಗ್ ಮಾತ್ರ ಅಲ್ಲ ಮುಂದೆ ಒಂದು ಸಿನಿಮಾ ಕೂಡ ತೆರೆಯುವಂತಾಗಲಿ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಕನ್ನಡದ ನಟ ಹಾಗೂ ನಿರ್ದೇಶಕರಾದ ಎಂ.ಕೆ ಮಠ ಮಾತನಾಡಿ ಶುಭ ಹಾರೈಸಿದರು.

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಶೋಭಿತ ಸತೀಶ್ ಮಾತನಾಡಿ, ಶಿಕ್ಷಕರಿಗೆ ಸಂತೋಷವಾಗುವುದು ಯಾವಾಗ ಎಂದರೆ ಮಕ್ಕಳ ಪ್ರತಿಭೆಗೆ ತಮ್ಮ ವ್ಯಕ್ತಿತ್ವವನ್ನು ತಾವೇ ರೂಪಿಸಿಕೊಂಡಾಗ ಅದೇ ಒಂದು ಹೆಮ್ಮೆ. ನಮ್ಮ ವಿದ್ಯಾರ್ಥಿಗಳ ಗ್ರಹಚಾರ ಎಂಬ ಆಲ್ಬಮ್ ಸಾಂಗ್ ಬಹಳ ಸುಂದರವಾಗಿ ಮೂಡಿಬಂದಿದೆ. ಇನ್ನು ಹೀಗೆ ಬೇರೆ ಬೇರೆ ಸಾಧನೆಯನ್ನು ಮಾಡಬೇಕು ಎಂದು ಅವರು ಹೇಳಿದರು.


ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷರು, ಮತ್ತು ಗ್ರಹಚಾರ ಆಲ್ಬಮ್ ಸಾಂಗ್ ತಂಡದ ಕಲಾವಿದರು ಉಪಸ್ಥಿತರಿದ್ದರು. ಜನ್ಮ ಕ್ರೀಯೇಷನ್ ಹರ್ಷ ಕುಮಾರ್ ರೈ ಮಾಡಾವು ಇವರು ಸಹಕರಿಸಿದರು. ಪ್ರಾರ್ಥನೆ ಇಶಾನ್ ನಡೆಸಿಕೊಟ್ಟು ಸ್ವಾಗತವನ್ನು ವಿನೋದ್ ಆಚಾರ್ಯ ಇವರು ಮಾಡಿ ಧನ್ಯವಾದವನ್ನು ಕೀರ್ತನ್ ಶೆಟ್ಟಿ ಮಾಡಿದರು ಈ ಸಂದರ್ಭದಲ್ಲಿ ಅನೇಕ ಕಲಾಭಿಮಾನಿಗಳು ಆಲ್ಬಂ ವೀಕ್ಷಿಸಲು ಸೇರಿದ್ದರು.

LEAVE A REPLY

Please enter your comment!
Please enter your name here