ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಅವರಿಗೆ ನುಡಿನಮನ ಕಾರ್ಯಕ್ರಮ

0

This image has an empty alt attribute; its file name is e34b1a98-7011-45dd-b613-f938012566a6.jpg

ಆಲಂಕಾರು: ಆಲಂಕಾರು ಗ್ರಾಮದ ಬಿ.ಜೆ.ಪಿ ಬೂತ್ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಅವರು ನ.13ರಂದು ಮೃತರಾಗಿದ್ದು, ನುಡಿನಮನ ಕಾರ್ಯಕ್ರಮ ಆಲಂಕಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಬಿಜೆಪಿ ಸುಳ್ಯ ಮಂಡಲ ಪ್ರದಾನ ಕಾರ್ಯದರ್ಶಿ ರಾಕೇಶ್ ರೈ ಕಡೆಂಜಿ ನುಡಿನಮನ ಸಲ್ಲಿಸಿ
ಮೃತರ ಉತ್ತಮ ಗುಣನಡತೆಗಳನ್ನು ನಾವು ಅಳವಡಿಸಿ ಪಾಲಿಸಿಕೊಂಡು ಬರುವುದೇ ಮೃತರಿಗೆ ನಾವು ಅರ್ಪಿಸುವ ನಿಜವಾದ ಶ್ರದ್ಧಾಂಜಲಿ ಎಂದು ತಿಳಿಸಿದರು. ಪ್ರಮುಖರಾದ ಪ್ರದೀಪ್ ರೈ ಮನವಳಿಕೆ, ಸದಾಶಿವ ಶೆಟ್ಟಿ ಮಾರಂಗ, ಸದಾನಂದ ಆಚಾರ್ಯ ಶರವೂರು, ದಾಮೋದರ ಗೌಡ ಕಕ್ವೆ, ಆಲಂಕಾರು ಗ್ರಾ.ಪಂ ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷ ರವಿ ಪೂಜಾರಿ .ಕೆ ನುಡಿನಮವ ಸಲ್ಲಿಸಿ ಮೃತರ ಅತ್ಮಕ್ಕೆ ಚಿರಶಾಂತಿ ದೊರೆಯಲೆಂದು ಪ್ರಾರ್ಥಿಸಿದರು. ಪೂವಪ್ಪ ನಾಯ್ಕ್ ಎಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಮೃತರ ಅತ್ಮಕ್ಕೆ ಸದ್ಗತಿ ದೊರೆಯಲೆಂದು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ಶಾರದ, ಕೋಟಿ ಚೆನ್ನಯ ಮಿತ್ರವೃಂದ ಅಧ್ಯಕ್ಷ ಜಯಂತ ಪೂಜಾರಿ ನೆಕ್ಕಿಲಾಡಿ ಪ್ರಮುಖರಾದ ದಾಮೋದರ ಗೌಡ ಆಲಡ್ಕ, ಹರೀಶ್ ಎಂತಡ್ಕ, ಮನೋಹರ ಕಕ್ವೆ, ದಿನೇಶ್ ದೇವಾಡಿಗ ಕುಕ್ಕೇರಿ, ಜನಾರ್ದನ ದೇವಾಡಿಗ, ಪ್ರಶಾಂತ್ ರೈ ಜಿ, ರವಿ ಕೋಡಿಲ,
ದಿವಾಕರ ಕುಂಬಾರ, ಶೀನಪ್ಪ ಕುಂಬಾರ, ರಮೇಶ್ ಕೆ, ಕೃಷ್ಣಪ್ಪರವರ ತಮ್ಮ ಗುರುವಪ್ಪ ಕೆ, ಮಗ ಪ್ರಕಾಶ್‌ ಕೆ ಕೀರ್ತನ್ ಕೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here