ಕೊಂಡಾಡಿಕೊಪ್ಪ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ರಚನೆ

0

ಅಧ್ಯಕ್ಷರಾಗಿ ವಿನೋದ್ ಕೊಂಡಾಡಿಕೊಪ್ಪ, ಕಾರ್ಯದರ್ಶಿಯಾಗಿ ಚಂದ್ರಶೇಖರ ಕೊಂಡಾಡಿಕೊಪ್ಪ

ಕಾಣಿಯೂರು: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪ ಇದರ ಹಿರಿಯ ವಿದ್ಯಾರ್ಥಿ ಸಂಘದ ರಚನೆಯು ಇತ್ತೀಚೆಗೆ ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ವಿನೋದ್ ಕೊಂಡಾಡಿಕೊಪ್ಪ, ಕಾರ್ಯದರ್ಶಿಯಾಗಿ ಚಂದ್ರಶೇಖರ ಕೊಂಡಾಡಿಕೊಪ್ಪ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪವನ್ ಮತ್ತು ಮೋಕ್ಷಿತಾ, ಜೊತೆ ಕಾರ್ಯದರ್ಶಿಯಾಗಿ ರಜನೀಶ್ ಮತ್ತು ಹರೀಶ ಕಮಿತ್ತಿಲು, ಕೋಶಾಧಿಕಾರಿಯಾಗಿ ಕೀರ್ತನ್ ಕೊಂಡಾಡಿಕೊಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂದೀಪ್ ಕೊಂಡಾಡಿ, ಪ್ರವೀಣ, ಪ್ರದೀಪ್, ಶಶಿಕುಮಾರ್ ಕಮಿತ್ತಿಲು, ಸಂದೀಪ್ ನಾಡ್ತಿಲ, ಚೇತನ್ ನಾಡ್ತಿಲ, ಪ್ರೀತಂ ದೇವಾಡಿಗ, ಶ್ರೇಯಸ್ ಬಾರಡ್ಕ ಆಯ್ಕೆಯಾದರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರಾದ ಶೀನಪ್ಪ ಕುಂಬಾರ ಜನಾರ್ದನ ನಾಡ್ತಿಲ ವೀರೇಂದ್ರ ಏಂತಡ್ಕ ಮಾತೃಶ್ರೀ ಭಜನಾ ಮಂಡಳಿ ಅಧ್ಯಕ್ಷ ದಿವಾಕರ ಕೊಂಡಾಡಿಕೊಪ್ಪ, ಗ್ರಾಮಾಭಿವೃದ್ಧಿ ಯೋಜನೆಯ ಹರೀಶ್ ಏಂತಡ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ ಕಮಿತ್ತಿಲು, ಉಪಾಧ್ಯಕ್ಷೆ ಲತಾ ಶರವೂರು ಉಪಸ್ಥಿತರಿದ್ದರು.ಶಾಲಾ ಮುಖ್ಯ ಗುರು ಜಯಂತ್ ವೈ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here