‘ಭವಿಷ್ಯದಲ್ಲಿ ಎಂಎಸ್‌ಎಂಇ ಉದ್ದಿಮೆದಾರರ ನೋಂದಾವಣೆ ಅಗತ್ಯ’- ಶೃತಿ ಜಿ.ಕೆ
ಪುತ್ತೂರು:ಭಾರತದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು (ಎಂ.ಎಸ್.ಎಂ.ಇ)ಬೆಳವಣಿಗೆ ಮತ್ತು ಅಭಿವೃದ್ಧಿಗೆ ನೆರವಾಗಲು ಭವಿಷ್ಯದಲ್ಲಿ ನೋಂದಾವಣೆ ಅಗತ್ಯವಾಗಿದೆ ಎಂದು ಎಂ.ಎಸ್.ಎಂ.ಇ. ಡೆವೆಲಪ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಮಂಗಳೂರು ಶಾಖೆಯ ಸಹಾಯಕ ನಿರ್ದೇಶಕಿ ಶೃತಿ ಜಿ.ಕೆ ಹೇಳಿದ್ದಾರೆ.
ಭಾರತ ಸರಕಾರ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿ ಕಮಿಷನರ್ ಕಚೇರಿ(ಎಂ.ಎಸ್.ಎಂ.ಇ)ಯ ಮಂಗಳೂರುನಲ್ಲಿರುವ ಎಂ.ಎಸ್.ಎಂ.ಇ. ಡೆವಲಪ್‌ಮೆಂಟ್ ಮತ್ತು ಫೆಸಿಲಿಟೇಶನ್ ಆಫೀಸ್ ಶಾಖೆ ಹಾಗೂ ಪುತ್ತೂರು ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಮತ್ತು ಪುತ್ತೂರು ಇಂಡಸ್ಟ್ರೀಸ್ ಅಸೋಸಿಯೇಶನ್ ಸಹಯೋಗದಲ್ಲಿ ಮುಕ್ರಂಪಾಡಿಯ ಇಂಡಸ್ಟ್ರಿಯಲ್ ಅಸೋಸಿಯೇಶನ್ ಕಟ್ಟಡದಲ್ಲಿ ನ.೨೯ರಂದು ‘ಉದ್ದಿಮೆದಾರರ ಜಾಗೃತಿ’ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.ಯುವ ಉದ್ದಿಮೆದಾರರಿಗೆ ಮತ್ತು ಸ್ಟಾರ್ಟ್ ಅಪ್ ಪ್ರಾರಂಭಿಸುವ ಉತ್ಸಾಹಿ ಯುವ ಉದ್ಯಮಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಕಡೆಯಿಂದ ಲಭ್ಯವಿರುವ ಸೌಲಭ್ಯಗಳು ಮತ್ತು ಬ್ಯಾಂಕ್‌ನಿಂದ ಸಿಗುವ ಸವಲತ್ತುಗಳ ಕುರಿತಾಗಿ ಅವರು ಮಾಹಿತಿ ನೀಡಿದರು.ಸ್ವಂತ ಉತ್ಪನ್ನಗಳಿಗೆ ಪೇಟೆಂಟ್ ಮಾಡಿಕೊಳ್ಳಿ.ಇಂಟಲೆಕ್ಚುವಲ್ ಪ್ರಾಪರ್ಟಿಗೆ ಹೋಗಿ ನೋಂದಾವಣೆ ಮಾಡಿ ಎಂದವರು ಕರೆ ನೀಡಿದರು.
ಸ್ಪೂರ್ತಿಯ ಮಾತುಗಳನ್ನಾಡಿದ ರಾಧಾಕೃಷ್ಣ ಇಟ್ಟಿಗುಂಡಿ:
ಯಶಸ್ವಿ ಉದ್ಯಮಿ ‘ನಿತ್ಯ ಚಪಾತಿ’ಯ ರಾಧಾಕೃಷ್ಣ ಇಟ್ಟಿಗುಂಡಿ ಅವರು ತಮ್ಮ ಯಶಸ್ವಿ ಉದ್ಯಮದ ಕುರಿತು ಮಾಹಿತಿ ನೀಡಿ ಯುವ ಉದ್ಯಮಿಗಳಿಗೆ ಸ್ಪೂರ್ತಿದಾಯಕರಾದರು.ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪಿ.ವಾಮನ್ ಪೈ, ಸಂಪನ್ಮೂಲ ವ್ಯಕ್ತಿ ಪ್ರವೀಣ್ ಎಸ್ ಭಂಡಾರಿ, ಬ್ಯಾಂಕ್ ಆ- ಬರೋಡದ ಸೀನಿಯರ್ ಮೆನೇಜರ್ ಸರಿತಾ ನಾಯರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಜಾನ್ ಕುಟಿನ್ಹಾ, ಮನೋಜ್, ಸೌಮ್ಯ ಭಟ್, ಸಿಂಚನ, ವಿದ್ಯಾ ಸರಸ್ವತಿ, ಸೌಜನ್ಯ ಅವರು ಅತಿಥಿಗಳನ್ನು ಗೌರವಿಸಿದರು.ಪುತ್ತೂರು ಕೈಗಾರಿಕಾ ಸಂಘದ ಅಧ್ಯಕ್ಷ ಶಿವಶಂಕರ್ ಭಟ್ ಸ್ವಾಗತಿಸಿದರು.ವಿದ್ಯಾರ್ಥಿನಿ ಮಾನಸ ಪೈ ಪ್ರಾರ್ಥಿಸಿದರು.ಹಿಮಾ ರೆಫ್ರಿಜರೇಶನ್‌ನ ಸಂಧ್ಯಾ ಮತ್ತು ರಾಜೇಶ್ ಕಾರ್ಯಕ್ರಮ ಸಂಯೋಜಕರಾಗಿದ್ದರು.