ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಪೂರ್ವ ಅಂತರ ಕಾಲೇಜು ಮಟ್ಟದ ಫೆಸ್ಟ್‌-TIARA 2023

0

ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಪೂರ್ವ ಅಂತರ ಕಾಲೇಜು ಮಟ್ಟದ ಫೆಸ್ಟ್ TIARA 2023 ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ ಸೀತಾರಾಮ ರೈ ವಿದ್ಯಾರ್ಥಿಗಳಿಗೆ ಕಲಿಕೆಯೊಂದಿಗೆ ಸಹಪಠ್ಯ ಚಟುವಟಿಕೆಗಳು ಅಗತ್ಯ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್.ಎಲ್.ಶೆಟ್ಟಿ ಮಾತನಾಡಿ, ಸ್ಪರ್ಧೆ ಯಾವುದೇ ಇರಲಿ ಅದನ್ನು ಸ್ಪರ್ಧಾತ್ಮಕ ಮನೋಭಾವದಿಂದಲೇ ಸ್ವೀಕರಿಸಬೇಕು ಎಂದರು. ಮುಖ್ಯ ಅತಿಥಿ ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ,ಸಂಸ್ಥೆಯ ಬಗ್ಗೆ ಅಭಿಮಾನದ ಮಾತುಗಳನ್ನಾಡಿ ಸ್ಪರ್ಧೆಯಲ್ಲಿ ಸೋಲು ಗೆಲುವು ಇದ್ದದ್ದೇ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಸದಸ್ಯರಾದ ರಶ್ಮಿ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ನಾರಾಯಣ ಮೂರ್ತಿ ಕೆ ,ಉಪಪ್ರಾಂಶುಪಾಲ ಶೇಷಗಿರಿ ಎಂ, ಫೆಸ್ಟ್ ನ ಸಂಘಟಕರಾದ ಬಿಸಿಎ ವಿಭಾಗದ ಉಪನ್ಯಾಸಕಿ ಪ್ರತಿಭಾ ಭಟ್ ಹಾಗೂ ವಿದ್ಯಾರ್ಥಿ ಸಂಘಟಕ ಶಮೀರ್ ಹಾಗೂ ಸಾದಿಕ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಕು.ಶಝಾನ ಸ್ವಾಗತಿಸಿ ವಂದಿಸಿದರು. ವಿದ್ಯಾರ್ಥಿನಿ ಸಫಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಬೆಸ್ಟ್ ಮ್ಯಾನೇಜರ್, ಕ್ವಿಜ್, ಡ್ಯಾನ್ಸ್, ಮೂವಿ ಸ್ಪೂಫ್, ದೇಶಭಕ್ತಿ ಗೀತೆ, ಮ್ಯಾಡ್ ಏಡ್ ಶೋ, ವೀಡಿಯೋ ಎಡಿಟಿಂಗ್ ಮೊದಲಾದ ಸ್ಪರ್ಧೆಗಳು ನಡೆಯಿತು.

ಸಮಾರೋಪ ಸಮಾರಂಭ

ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದ TOP AND YIELD RENTAL CO. DUBAI’ ಮಾಲೀಕರಾದ ಸಹಜ್ ರೈ ಮಾತನಾಡಿ, ಯಾವುದೇ ಸಾಧನೆಯನ್ನು ಮಾಡಬೇಕಾದರೆ ಹಿಂದೆ ಗುರು ಮುಂದೆ ಗುರಿ ಇರಬೇಕು ಎಂಬ ಸಂದೇಶ ನೀಡಿದರು. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್‌ ಮಾತನಾಡಿ, ನಾವು ಮಾಡುವ ಯಾವುದೇ ಕೆಲಸ ಕಾರ್ಯಗಳನ್ನು ಯಾವುದೇ ಫಲಾಪೇಕ್ಷೆಗಳಿಲ್ಲದೆ ಮಾಡಬೇಕು ಎನ್ನುವ ಸಲಹೆ ನೀಡಿದರು. ಅಧ್ಯಕ್ಷತೆಯನ್ನು  ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಇಂಜಿನಿಯರ್ ಅಶ್ವಿನಿ ಎಲ್ ಶೆಟ್ಟಿಯವರು ಸಮಯದ ಮಹತ್ವವನ್ನು ತಿಳಿಸುವುದರೊಂದಿಗೆ ತೆರಿಗೆಯನ್ನು ಕಟ್ಟುವಂತಹ ಪ್ರಜೆಗಳು ಇಂದಿನ ವಿದ್ಯಾರ್ಥಿಗಳಾಗಬೇಕು ಎಂದರು.

ವಿದ್ಯಾರ್ಥಿ ಸಾದಿಕ್ ಸ್ವಾಗತಿಸಿ, ಉಪನ್ಯಾಸಕಿ ಪ್ರತಿಭಾ ಭಟ್ ವಂದಿಸಿದರು.

ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಬೆಳ್ತಂಗಡಿಯ ಪ್ರಸನ್ನ ಕಾಲೇಜಿನ ವಿದ್ಯಾರ್ಥಿಗಳಿಗೆ ರೂ. 10,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು. ರನ್ನರ್ ಆಗಿ ಹೊರಹೊಮ್ಮಿದ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ರೂ.5000/- ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here