ಪುತ್ತೂರು: ಪುರಾತನ ಕಾರಣಿಕ ಕ್ಷೇತ್ರ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಡಿ.16ರಿಂದ 19ರ ತನಕ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ ಷಷ್ಠಿ ಮಹೋತ್ಸವದ ಆಮಂತ್ರಣ ಪತ್ರಿಕೆಯು ಡಿ.1ರಂದು ಬಿಡುಗಡೆಗೊಂಡಿತು.
ಅರ್ಚಕ ಯೋಗೀಶ ಭಟ್ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಬಿಡುಗಡೆಗೊಳಿಸಲಾಯಿತು. ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಉಪತಹಶೀಲ್ದಾರ್ ಸುಲೋಚನ ಪಿ.ಕೆ, ಉತ್ಸವ ಸಮಿತಿ ಅಧ್ಯಕ್ಷ ತಂತ್ರಿ ಕೆ.ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಸಂಚಾಲಕ ದಯಾನಂದ ಎಂ.,ಸದಸ್ಯರಾದ ಗಣೇಶ ನೈತ್ತಾಡಿ, ವಿಶ್ವನಾಥ ನಾಯ್ಕ, ಗಣೇಶ ದೇವಾಡಿಗ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ವಿಶ್ವನಾಥ ಗೌಡ ಪಟ್ಟೆ, ಅರ್ಚಕ ರಮೇಶ ಭಟ್, ಯು.ಕೆ ನಾಯ್ಕ, ದಯಾನಂದ ಅತ್ತಾಳ, ಶ್ಯಾಮಣ್ಣ, ದೇವಸ್ಥಾನದ ಗುಮಾಸ್ತ ಪ್ರಶಾಂತ್ ಕೆಮ್ಮಿಂಜೆ, ಸಿಬಂದಿ ರಘುನಾಥ ಪೂಜಾರಿ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.
ಡಿ.16ರಂದು ಪವಮಾನಾಭಿಷೇಕ, 6 ತೆಂಗಿನಕಾಯಿ ಮಹಾಗಣಪತಿ ಹೋಮ, ಬಿಂಬ ಶುದ್ಧಿ, ಪಂಚ ವಿಂಶತಿ ಕಲಶಪೂಜೆ, ಶ್ರೀ ದೇವರಿಗೆ ಕಲಷಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಕಾರ್ತಿಕ ಪೂಜೆ, ಡಿ.17ರ ಪಂಚಮಿಯಂದು ಕ್ಷೇತ್ರದ ನಾಗ ಸನ್ನಿಧಿಯಲ್ಲಿ ಸಾಮೂಹಿಕ ಆಶ್ಲೇಷಾ ಬಲಿ, ನಾಗ ತಂಬಿಲ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ದೇವರ ಬಲಿ ಹೊರಟು ಪಂಚಮಿ ಉತ್ಸವ, ಪಲ್ಲಕ್ಕಿ ಉತ್ಸವ, ಕಟ್ಟೆ ಪೂಜೆ, ಶಿರಾಡಿ ದೈವದ ಭಂಡಾರ ಆಗಮಿಸಲಿದೆ. ಡಿ.18ರ ಷಷ್ಠಿಯಂದು ದೇವರ ಬಲಿ ಹೊರಟು ಷಷ್ಠಿ ಮಹೋತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವುದು, ರಂಗಪೂಜೆ, ವೈದಿಕ ಮಂತ್ರಾಕ್ಷತೆ, ದೈವಗಳ ನೇಮ, ಡಿ.19ರಂದು ಪಂಚ ವಿಂಶತಿ ಕಲಶಪೂಜೆ, ದೇವರಿಗೆ ಸೀಯಾಳಾಭಿಷೇಕ, ಸಂಪ್ರೋಕ್ಷಣಾ ಕಲಷಾಭಿಷೇಕ, ಮಧ್ಯಾಹ್ನ ಮಹಾಪೂಜೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಷಷ್ಠಿ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.