ಸಶಕ್ತ ಭವಿಷ್ಯದ ರೂಪೀಕರಣಕ್ಕೆ ವಿಸ್ತಾರ ಚಟುವಟಿಕೆಗಳು ಪೂರಕ :ರಾಮಚಂದ್ರ ಡಿ
ಪುತ್ತೂರು: ಡಾ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆಯ ಸ್ನಾತಕೋತ್ತರ ವಿಭಾಗದ 10 ವಿದ್ಯಾರ್ಥಿಗಳಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿಯ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ‘ಸಶಕ್ತ ಭವಿಷ್ಯ’ ಎಂಬ ವಿಷಯದ ಬಗ್ಗೆ ಒಂದು ದಿನದ ತರಬೇತಿಯನ್ನು ನೀಡಲಾಯಿತು. ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಹಲವಾರು ವಿಷಯದ ಕುರಿತು ಚಟುವಟಿಕೆಗಳನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಮಚಂದ್ರ ಡಿ ಬೆಳ್ಳಾರೆ ಮತ್ತು ಬೆಟ್ಟಂಪಾಡಿ ಕಾಲೇಜಿನೊಳಗಿರುವ ಅವಿನಾಭಾವ ಸಂಬಂಧವನ್ನು ನೆನಪಿಸಿದರು. ಅತಿಥಿ ಉಪನ್ಯಾಸಕಿ ಸಂಧ್ಯಾ ಲಕ್ಷ್ಮೀ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬೆಳ್ಳಾರೆ ಕಾಲೇಜಿನ ವಿದ್ಯಾರ್ಥಿಗಳಾದ ಲಿಖಿತಾ ಕೆ, ನಿಶ್ಮಿತಾ ಎಂ, ರೀಮಾ, ತೇಜಸ್ವಿನಿ, ಹಿಮ, ಪವಿತ್ರ ಎಸ್, ನಿತಿನ್, ಪ್ರಜ್ಞಾ, ಸುರಕ್ಷಾ ಮತ್ತು ನಿತಿನ್ ರವರು ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.